Site icon Vistara News

Shivamogga News: ಪ್ರತಿಭಾನ್ವಿತರಿಗೆ ಪ್ರೋತ್ಸಾಹ, ಅವಕಾಶಗಳಿಲ್ಲ: ನಿರ್ಭಯಾನಂದ ಸ್ವಾಮೀಜಿ

felicitation programme for athletes at Ripponpet 

ರಿಪ್ಪನ್‌ಪೇಟೆ: ಭಾರತದಲ್ಲಿ ಪ್ರತಿಭಾನ್ವಿತ ಸಾಧಕರಿದ್ದಾರೆ. ಆದರೆ ಅವರಿಗೆ ಪ್ರೋತ್ಸಾಹ-ಅವಕಾಶಗಳಿಲ್ಲ, ನಮ್ಮಲ್ಲಿ ಎಷ್ಟೇ ಸಂಶೋಧನೆಗಳಾದರೂ (Research) ಅವು ಸದ್ಬಳಕೆಯಾಗಿದ್ದು ವಿದೇಶಗಳಲ್ಲಿ ಹೀಗಾಗಿ ಆ ದೇಶಗಳು ಮುಂದುವರಿದಿವೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಜ್ಞಾನ ಮತ್ತು ತಾಂತ್ರಿಕತೆ ಇಂದು ಬಹಳಷ್ಟು ವಿಸ್ತಾರಗೊಂಡಿದೆ. ಅದ್ಭುತ ಸಾಧನೆಗಳಾಗಿವೆ. ವಿಜ್ಞಾನವನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಏಕಾಗ್ರತೆಯಿಂದ ಅಧ್ಯಯನ ಮಾಡುವ ಮೂಲಕ ಮುಂದೊಂದು ದಿನ ದೊಡ್ಡ ವಿಜ್ಞಾನಿಯಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Vastu Tips: ಸಂಪತ್ತು, ಆರೋಗ್ಯ ವೃದ್ಧಿಗೆ ಇಲ್ಲಿದೆ ಸರಳ ಮಾರ್ಗ

ಬೆಂಗಳೂರು ಯಲಹಂಕ ರಾಮಕೃಷ್ಣ ವೇದಾಂತ ಆಶ್ರಮದ ಆಭಯಾನಂದಜಿ ಮಹಾರಾಜ್, ಹೊಸನಗರ ತಾಲೂಕಿನ ಸುಳಗೋಡು ಶ್ರೀರಾಮಕೃಷ್ಣ ಯೋಗಪೀಠದ ಶ್ರೀಸ್ವಾಮಿ ಪ್ರಕಾಶನಂದಜೀ ಮಹಾರಾಜ್ ನೇತೃತ್ವ ವಹಿಸಿದ್ದರು.

ಶ್ರೀ ಶಾರದ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: ‘ಫೆಮಾ’ ಉಲ್ಲಂಘಿಸಿದ ಬೈಜುಸ್‌ಗೆ 9000 ಕೋಟಿ ರೂ. ಪಾವತಿಸಲು ಇಡಿ ನೋಟಿಸ್!

ಕು.ನವ್ಯ ಪ್ರಾರ್ಥಿಸಿದರು, ಶಾರದ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಆಧ್ಯಕ್ಷ ಡಿ.ಎಂ. ದೇವರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ವಂದಿಸಿದರು.

Exit mobile version