ಸೊರಬ: ಕೆರೆಯಲ್ಲಿ ನೂರಾರು ಮೀನುಗಳು (Fishes) ಸಾವನ್ನಪ್ಪಿದ ಘಟನೆ ತಾಲೂಕಿನ ಗೆಂಡ್ಲ ಗ್ರಾಮದಲ್ಲಿ (Shivamogga News) ಜರುಗಿದೆ.
ಗೆಂಡ್ಲ ಗ್ರಾಮದ ಹೊಟ್ಟಕೇರಿ ಕೆರೆಯಲ್ಲಿ ಈ ಘಟನೆ ನಡೆದಿದೆ, ಮೀನುಗಳು ಕೆರೆಯಲ್ಲಿ ತೇಲುತ್ತಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಕೆರೆಯಲ್ಲಿ ಮೀನುಗಳು ಏಕಾಏಕಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಗೊಂದಲವನ್ನುಂಟು ಮಾಡಿದೆ. ಕೆರೆಗೆ ಕಳೆದ ಮಳೆಗಾಲದಲ್ಲಿ 50 ಸಾವಿರ ಮೀನಿನ ಮರಿಗಳನ್ನು ಬಿಡಲಾಗಿತ್ತು. ಇನ್ನು ಶನಿವಾರ ಕೆರೆಬೇಟೆ ನಡೆಸಲು ಮುಂದಾಗಿದ್ದ ಗ್ರಾಮಸ್ಥರಿಗೆ ಏಕಾಏಕಿ ಕೆರೆಯಲ್ಲಿದ್ದ ಮೀನುಗಳ ಸಾವು ಕಂಗಾಲಾಗಿಸಿದೆ.
ಇದನ್ನೂ ಓದಿ: Arecanut Price: ಅಡಿಕೆ ಧಾರಣೆಯಲ್ಲಿ ದಿಢೀರ್ ಕುಸಿತ; ಬೆಲೆ ಇಳಿಕೆಗೆ ಅಕ್ರಮ ಸಾಗಣೆ ಕಾರಣವೇ?
ಇನ್ನು ಕೆರೆಯಲ್ಲಿ ಮೀನುಗಳ ಸಾವನ್ನು ಗಮನಿಸಿದ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಆಮ್ಲಜನಕ ಕೊರತೆಯಿಂದ ಮೀನುಗಳ ಮರಣವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸಂಪೂರ್ಣ ಮಾಹಿತಿ ಸಿಗುವವರೆಗೆ ಕೆರೆಯಲ್ಲಿ ಮೀನು ಹಿಡಿಯದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಕುರಿತು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಪ್ರಯೋಗಾಲಯಕ್ಕೆ ಕೆರೆಯ ನೀರನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.