ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣ ಸಮೀಪದ ಇತಿಹಾಸ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಗುರುವಾರ ಶ್ರೀರಾಮೇಶ್ವರ ದೇವರ ಪ್ರತಿಷ್ಠಾಪನಾ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ (Shivamogga News) ನಡೆಸಲಾಯಿತು. ಈ ಸಮಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ವೇ.ಪುಟ್ಟಯ್ಯ ಎಂ ಅಲಳ್ಳಿಮಠ ಮತ್ತು ಪಂಚಾಕ್ಷರಯ್ಯ ಮಲ್ಲಾಪುರ ಇನ್ನಿತರ ಪುರೋಹಿತ ವರ್ಗದವರ ನೇತೃತ್ವದಲ್ಲಿ ನಡೆದವು.
ಶ್ರೀ ರಾಮೇಶ್ವರ ದೇವರಿಗೆ 108 ಕುಂಭಾಭಿಷೇಕ ಮತ್ತು ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ, ರುದ್ರಹೋಮ, ಪಂಚಾಮೃತ ಅಭಿಷೇಕ, ಪರಿವಾರ ದೇವರುಗಳಿಗೆ ಪೂಜೆ, ಮಹಾಮಂಗಳಾರತಿ ನಡೆಸಲಾಯಿತು. ಹಾಗೆಯೇ ಪ್ರಸಾದ ವಿತರಣೆ ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು. ಇದಕ್ಕೂ ಮೊದಲು ಬುಧವಾರ ಸಂಜೆ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ ಪೂಜೆ ಜರಗಿತು.
ಇದನ್ನೂ ಓದಿ: Karnataka Election 2023: ಮೊಮ್ಮಗನನ್ನು ಪ್ರಚಾರಕ್ಕೆ ಕರೆ ತಂದ ಸಿದ್ದರಾಮಯ್ಯಗೆ ಪುಕ್ಕಲುತನ ಕಾಡುತ್ತಿದೆ: ಪ್ರತಾಪ್ ಸಿಂಹ
ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಪ್ಪ ಅವರ ಪರವಾಗಿ ಅವರ ಪತ್ನಿ ಯಶೋಧ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದೇವರಿಗೆ ಪೂಜೆ ಸಲ್ಲಿಸಿದ ಅವರು ಪತಿಯ ಗೆಲುವಿಗಾಗಿ ಪ್ರಾರ್ಥನೆ ನಡೆಸಿದರು. ನಂತರ ಅಲ್ಲಿ ಸೇರಿದ್ದ ಭಕ್ತರಲ್ಲಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ರಾಮೇಶ್ವರ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಗಣೇಶ್‌ರಾವ್ ಹಳಿಯೂರು, ಜಿ.ಎಂ.ದುಂಡರಾಜ ಗೌಡ, ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎಂ.ಬಿ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೆ. ರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮೀ, ಪಕ್ಷದ ಮುಖಂಡರಾದ ವಾಸಶೆಟ್ಟಿ, ಬೇಕರಿ ನಾರಾಯಣ, ಎಂ.ಸುರೇಶ್‌ಸಿಂಗ್, ಜಿ.ಡಿ.ಮಲ್ಲಿಕಾರ್ಜುನ, ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.