ಸೊರಬ: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಆಚರಿಸುವ ಎಲ್ಲ ಆಚರಣೆಗಳಲ್ಲಿ ವಿಶಿಷ್ಟವಾದ ಅರ್ಥವಿದ್ದು, ಚಿಂತಿಸಿದಾಗ ಅದರ ಅರ್ಥವ್ಯಾಪ್ತಿ ಅರಿವಾಗುತ್ತದೆ ಎಂದು ಜಡೆ ಹಿರೇಮಠ ಹಾಗೂ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ (Shivamogga News) ತಿಳಿಸಿದರು.
ತಾಲೂಕಿನ ತೊರವಂದ ಗ್ರಾಮದ ಸಮೀಪದ ಉಜ್ಜನಿಪುರದ ಬಸವೇಶ್ವರ ಸೇವಾ ಸಮಿತಿ ಹಾಗೂ ಭಕ್ತವೃದದ ಸಹಕಾರದಿಂದ ನಿರ್ಮಿಸಿ ಪ್ರತಿಷ್ಠಾಪಿಸಿದ ಬಸವೇಶ್ವರ ಹಾಗೂ ಗಣಪತಿ ಹಾಗೂ ನಾಗದೇವರ ಆಲಯ ಪ್ರವೇಶ ಹಾಗೂ ದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಜುಲೈನಿಂದ ಶೇ.23 ವೇತನ ಹೆಚ್ಚಳ ಮಾಡಿ: ಸಿ.ಎಸ್.ಷಡಾಕ್ಷರಿ ಒತ್ತಾಯ
ನಮ್ಮ ಆಚರಣೆಯ ಕಾರ್ಯಗಳ ಹಿಂದೆ ಒಂದು ಉದ್ದೇಶವಿದ್ದು, ಜಗತ್ತಿನ ಹಿತ ಕಾಯುವ ಅರ್ಥವಿರುತ್ತದೆ. ಆ ಅರ್ಥ ನಮಗೆ ಈಗ ಸದ್ಯಕ್ಕೆ ತಿಳಿಯದಿರಬಹುದು ಆದರೆ ವೈಜ್ಞಾನಿಕ ವಿಶ್ಲೇಷಣೆಗೊಳಪಟ್ಟಾಗ ಅದರ ಮಹತ್ವ ನಮಗೆ ಅರಿವಾಗುತ್ತದೆ. ನಮ್ಮ ಸಂಸ್ಕೃತಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ರಹದಾರಿಯನ್ನು ತೋರುತ್ತದೆ. ಇದು ನಮ್ಮ ಪುರಾತನರ ಆಶಯವಾಗಿತ್ತು. ಆದ್ದರಿಂದ ಅಂತಹ ಆಚರಣೆಗಳನ್ನು ಸಂಪ್ರದಾಯದ ಹೆಸರಲ್ಲಿ ರೂಢಿಯಲ್ಲಿ ಬಂದಿದೆ ಎಂದರು.
ಮೂಡಿ ಸಂಸ್ಥಾನ ಮಠದ ಸದಾಶಿವ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಳಗುಪ್ಪದ ಸಿದ್ಧವೀರ ಸ್ವಾಮೀಜಿ ಹಾಗೂ ಶಾಂತಪುರದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಇದನ್ನೂ ಓದಿ: Viral Video: ರೀಲ್ಸ್ ಮಾಡೋ ಗೀಳು; ನಾಯಿಗೆ ಚಿತ್ರಹಿಂಸೆ ನೀಡಿದ ಯುವಕನಿಗೀಗ ಕಾದಿದೆ…
ಕಾರ್ಯಕ್ರಮದಲ್ಲಿ ದಾನಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತೊರವಂದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಮಹಾಪ್ರಸಾದ ವಿತರಿಸಲಾಯಿತು.