ಸೊರಬ: ಮಕ್ಕಳು ಹೇಳಿದ್ದನ್ನು ಮಾಡುವ ಬದಲು ನಾವು ಮಾಡಿದ್ದನ್ನು ಅನುಕರಿಸುತ್ತಾರೆ. ಹಿರಿಯರ ನಡೆ- ನುಡಿಯನ್ನು ಮಕ್ಕಳು ಅನುಸರಿಸುವುದರಿಂದ ನಮ್ಮ ಚಾರಿತ್ರ್ಯ ಶುದ್ಧವಾಗಿರಬೇಕು ಎಂದು ಜಡೆ ಹಿರೇಮಠದ ಘನಬಸವ ಶ್ರೀ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ (Shivamogga News) ತಿಳಿಸಿದರು.
ತಾಲೂಕಿನ ದ್ವಾರಹಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಆಚರಿಸುವ ಗ್ರಾಮದೇವ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮಕ್ಕಳಿಗೆ ಸಂಪತ್ತನ್ನು ಕೊಡುವುದಕ್ಕಿಂತಲ್ಲೂ ಮುಖ್ಯವಾಗಿ ಸಂಸ್ಕಾರವನ್ನು ಕೊಡಬೇಕು. ಸಂಸ್ಕಾರವಿದ್ದ ವ್ಯಕ್ತಿ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳುತ್ತಾನೆ. ಸಂಸ್ಕಾರವಿರದ ವ್ಯಕ್ತಿ ಸಂಪತ್ತಿನೊಂದಿಗೆ ತನ್ನನ್ನೂ ಕಳೆದುಕೊಳ್ಳುತ್ತಾನೆ. ಜಗತ್ತಿನಲ್ಲಿ ಸಂಸ್ಕಾರವಿರದ ವ್ಯಕ್ತಿಗೆ ಯಾವ ಗೌರವವೂ ಸಿಗುವುದಿಲ್ಲ. ಅವರಿಂದ ಮನೆಯ ನೆಮ್ಮದಿ ಹಾಳಾಗುವುದಲ್ಲದೆ ಊರಿನ ನೆಮ್ಮದಿಯೂ ಹಾಳಾಗುತ್ತದೆ. ಸಂಸ್ಕಾರವಿರದ ವ್ಯಕ್ತಿ ಸಾರವಿರದ ಸಂಸಾರದಂತೆ ಎಂಬುದು ಅನುಭವಿಕರ ಮಾತು ಎಂದು ತಿಳಿಸಿದರು.
ಇದನ್ನೂ ಓದಿ: Eyes Care While Studying: ಪರೀಕ್ಷೆಯ ದಿನಗಳಲ್ಲಿ ಕಣ್ಣಿನ ಕಾಳಜಿ ಹೀಗಿರಲಿ…
ಹಿರೇಮಾಗಡಿ ಸಂಸ್ಥಾನದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದನ್ನೂ ಓದಿ: Private Laboratory: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ಒಳಗಿನ ಖಾಸಗಿ ಲ್ಯಾಬ್ ಬಂದ್; ಸರ್ಕಾರದ ಖಡಕ್ ಆದೇಶ!
ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಹಿರಿಯರು, ಶಾಲಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.