ಸೊರಬ: ತಾಲೂಕಿನಲ್ಲಿ ಇನಾಂ ಭೂಮಿಯ (Inam Land) ಪುನರ್ ಮಂಜೂರಾತಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ (Government) ಕಾಲಾವಕಾಶ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಸಲ್ಲಿಸುವ ಅವಧಿಯನ್ನು ಮುಂದಿನ ಒಂದು ವರ್ಷದ ಅವಧಿಗೆ ವಿಸ್ತರಿಸಿದರೆ ರೈತರಿಗೆ ಅನುಕೂಲವಾಗಲಿದೆ, ಈ ಸಂಬಂಧ ಸರ್ಕಾರ ಪರಿಶೀಲನೆ ನಡೆಸಿ, ಉಳುವ ರೈತನಿಗೆ ಭೂಮಿಯ ಹಕ್ಕನ್ನು ಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 75 ಯುನಿಟ್ ಉಚಿತ್ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಅದರೆ ಈಗ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 83 ಯೂನಿಟ್ ವಿದ್ಯುತ್ ನಿಗದಿ ಮಾಡುವತ್ತ ಸರ್ಕಾರ ಗಮನ ನೀಡಬೇಕು ಎಂದರು.
ಇದನ್ನೂ ಓದಿ: IND vs BAN: ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ; ಬಾಂಗ್ಲಾ ಎದುರಾಳಿ
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಪಟ್ಟಂತೆ ಕ್ಷೇತ್ರ ಮರು ವಿಂಗಡಣೆ ಅವೈಜ್ಞಾನಿಕವಾಗಿದೆ. ಕೆಲ ಪಕ್ಷದ ಮುಖಂಡರು ಸ್ವಹಿತಾಸಕ್ತಿಗಾಗಿ ಮರು ವಿಂಗಡಣೆ ಮಾಡಿಕೊಂಡಂತೆ ಕಾಣುತ್ತದೆ ಎಂದು ಆರೋಪಿಸಿದ ಅವರು, ತಾಲೂಕಿನ ಶಕುನವಳ್ಳಿ, ಅಗಸನಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರವನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಾಡಲಾಗಿದೆ. ಅಕ್ಕ ಪಕ್ಕದ ಕ್ಷೇತ್ರ ಹೊರತು ಪಡಿಸಿ ದೂರದ ಕ್ಷೇತ್ರವನ್ನು ಜೋಡಿಸಲಾಗಿದೆ. ನ್ಯಾರ್ಸಿ ಪಂಚಾಯಿತಿಯನ್ನು ಕುಪ್ಪಗಡ್ಡೆ ಕ್ಷೇತ್ರಕ್ಕೆ ಸೇರಿಸಲಾಗಿದೆ. ಇದೇ ಮಾದರಿ ಅನೇಕ ಲೋಪಗಳಿವೆ. ಅಡಳಿತ ಪಕ್ಷ ಮುಖಂಡರ ಅಣತಿಯಂತೆ ಕ್ಷೇತ್ರಗಳ ಮರು ವಿಂಗಡಣೆ ಅಗಿರಬಹುದು ಎನ್ನುವ ಅನುಮಾನ ಜನರಲ್ಲಿ ಕಾಡುತ್ತಿದೆ. ಆದ್ದರಿಂದ ಸೊರಬ ದಲಿತ ಸಂಘರ್ಷ ಸಮಿತಿಯಿಂದ ಆಕ್ಷೇಪಣೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Dasara Shopping: ದಸರಾ ಸೀಸನ್ ಶಾಪಿಂಗ್‌ನಲ್ಲಿ ಎಥ್ನಿಕ್ ವೇರ್ಸ್‌ಗೆ ಹೆಚ್ಚಿದ ಬೇಡಿಕೆ
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ತಾಲೂಕು ಸಂಘಟನಾ ಸಂಚಾಲಕ ನಾಗರಾಜ್ ಹುರುಳಿಕೊಪ್ಪ ಇದ್ದರು.