Site icon Vistara News

Shivamogga News: ರಿಪ್ಪನ್‌ಪೇಟೆಯಲ್ಲಿ ಸಡಗರ ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಣೆ

Gowri Ganesha festival celebrated in Ripponpet

ರಿಪ್ಪನ್‌ಪೇಟೆ: ಪಟ್ಟಣದಲ್ಲಿ ಸೋಮವಾರ ಗೌರಿ-ಗಣೇಶ ಹಬ್ಬವನ್ನು (Gowri-Ganesha festival) ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಗೌರಿ ಹಾಗೂ ಗಣೇಶ ಹಬ್ಬಗಳು ಒಂದೇ ದಿನ ಬಂದ ಹಿನ್ನೆಲೆಯಲ್ಲಿ ಗೌರಿಯನ್ನು ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಮತ್ತು ಗುರುರಾಜ ಭಟ್ ನೇತೃತ್ವದಲ್ಲಿ ಮುತ್ತೈದೆಯರು ಗೌರಿಯನ್ನು ಶ್ರದ್ದಾಭಕ್ತಿಯಿಂದ ತರುವುದರೊಂದಿಗೆ ಪ್ರತಿಷ್ಠಾಪನಾ ಪೂಜೆಯೊಂದಿಗೆ ಸಂಭ್ರಮದೊಂದಿಗೆ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಈಶ್ವರ ಶೆಟ್ಟಿ ಮತ್ತು ಪದಾಧಿಕಾರಿಗಳಾದ ಎನ್. ಸತೀಶ್, ಎಂ.ಡಿ. ಇಂದ್ರಮ್ಮ, ಸರಸ್ವತಿ, ವನಮಾಲ, ಜಯಲಕ್ಷ್ಮಿ, ಗಣೇಶ್ ಕಾಮತ್ , ಇನ್ನಿತರರು ಪಾಲ್ಗೊಂಡು ಗೌರಿ ಪೂಜೆಯಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಸಂಭ್ರಮಿಸಿದರು.

ಇದನ್ನೂ ಓದಿ: Gold Rate Today: ಹಬ್ಬದ ದಿನವೇ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ; ಇಂದಿನ ಬೆಲೆ ಇಷ್ಟು

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 56 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಗಣೇಶ ಮೂರ್ತಿಯನ್ನು ಸಮಿತಿಯವರು ಮೆರವಣಿಗೆ ಮೂಲಕ ಕರೆತರುವ ಮೂಲಕ ವಿನಾಯಕ ವೃತ್ತದಲ್ಲಿ ಹಿಂದೂ ಭಗವಧ್ವಜವನ್ನು ಹಾರಿಸಿ ಗಣಪತಿ ದೇವಸ್ಥಾನದ ಹಿಂಭಾಗದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ ಮಂಟಪದಲ್ಲಿ ಪ್ರತಿಷ್ಟಾಪನಾ ಪೂಜೆ ನೆರವೇರಿಸಲಾಯಿತು.

ಹಿಂದೂ ಭಗವಧ್ವಜವನ್ನು ನಿವೃತ್ತ ಸೇನಾನಿ ವೀರಭದ್ರಪ್ಪ ದ್ವಜಾರೋಹಣ ಮಾಡಿದರು.

ಇದನ್ನೂ ಓದಿ: Narendra Modi: ಜನ್ಮದಿನದಂದು ಮೆಟ್ರೋದಲ್ಲಿ ಮೋದಿ ಸಂಚಾರ; ಸಂಸ್ಕೃತದಲ್ಲಿ ಶುಭಕೋರಿದ ಯುವತಿ

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ನಾಗರಾಜ ಪವಾರ್, ಎನ್.ಸತೀಶ್, ಎಂ.ಬಿ. ಮಂಜುನಾಥ್, ಮಂಜುನಾಥ, ಎಂ .ಸುರೇಶ್‌ಸಿಂಗ್, ಆರ್. ರಾಘವೇಂದ್ರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ, ಹಿಂದೂ ಮಹಾಸಭಾದ ರಾಘು, ಯೋಗೇಶ್, ಡಿ.ಈ. ನಾಗಭೂಷಣ, ವೀರಭದ್ರಪ್ಪಗೌಡ, ವೈ.ಜೆ.ಕೃಷ್ಣ, ಭಾಸ್ಕರ್ ಶೆಟ್ಟಿ, ಬೇಕರಿ ನಾರಾಯಣ, ವೈ.ಜೆ.ಭಾಸ್ಕರ್, ಕೃಷ್ಣೋಜಿರಾವ್, ಶ್ರೀನಿವಾಸ್ ಅಚಾರ್, ಆರ್.ಎನ್. ಮಂಜುನಾಥ್ ಆಶೋಕಹಾಲುಗುಡ್ಡೆ ಮತ್ತು ಇತರರು ಪಾಲ್ಗೊಂಡಿದ್ದರು.

Exit mobile version