Site icon Vistara News

Shivamogga News: ಕುಟೀರ ಎಂಬುದು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದ ಸ್ವಾಮೀಜಿ

Gurupravesh ceremony of Samadhana Guru kutiera in Soraba

ಸೊರಬ: ಕುಟೀರ ಎಂಬುದು ಸನಾತನ ಪರಂಪರೆಯ ದ್ಯೋತಕವಾಗಿದ್ದು ಅದು ಆತ್ಮ ಸಾಧನೆಯ ಜತೆಗೆ ಅತ್ಮಜ್ಞಾನದ ಪ್ರಸರಣದ ಕೇಂದ್ರವಾಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ (Shivamogga News) ಅಭಿಪ್ರಾಯಪಟ್ಟರು.

ತಾಲೂಕಿನ ಜಡೆ ಹೋಬಳಿಯ ಬಂಕಸಾಣದ ಹೊಳೆಲಿಂಗೇಶ್ವರ ಕ್ಷೇತ್ರದ ಪುಣ್ಯ ಸಂಗಮ ಸ್ಥಳದ ಉತ್ತರವಾಹಿನಿಯಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್ ನಿಂದ ನಿರ್ಮಿಸಿದ ಸಮಾಧಾನ ಗುರು ಕುಟೀರದ ಗುರುಪ್ರವೇಶ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.

ಕುಟೀರ ಎಂಬುದು ಭಾರತೀಯ ಸಂಸ್ಕೃತಿಯ ಪ್ರತೀಕ. ವೇದಗಳು, ಆಗಮಗಳು ಉಗಮಿಸಿದ್ದು ಕುಟೀರದಲ್ಲಿ. ಕುಟೀರದಲ್ಲಿಯೇ ಮಹಾಕಾವ್ಯಗಳ ಜನನವಾಗಿದ್ದು. ಇದು ಋಷಿ ಮುನಿಗಳು ವಾಸಸ್ಥಾನವಾಗಿದೆ ಹಾಗು ಕುಟೀರವು ಆತ್ಮಜ್ಞಾನಕ್ಕೆ ಸಾಧನವಾಗಿದ್ದು ಇದೊಂದು ಸಂಸ್ಕಾರ ಕೊಡುವ ಕೇಂದ್ರವಾಗಿತ್ತು ಎಂದರು.

ಇದನ್ನೂ ಓದಿ: PM Narendra Modi: ಯುಎಇ ಅಧ್ಯಕ್ಷರನ್ನು “ಸಹೋದರ’ ಎಂದು ಕರೆದ ಪ್ರಧಾನಿ ಮೋದಿ

ಸಮಾಧಾನ ಇಂದು ಗುರುಕುಟೀರದ ರೂಪದಲ್ಲಿ ನಿರ್ಮಾಣವಾಗಿದೆ. ಇದೊಂದು ಪವಿತ್ರ ಕ್ಷೇತ್ರ. ಮೌನ ತಪಸ್ವಿಗಳು ಯೋಗಿಗಳ ಸಮಾಧಾನ ಧ್ಯಾನ ಕೇಂದ್ರವು ನಾಡಿನಾದ್ಯಂತ ಸರ್ವರಿಗೂ ಶಾಂತಿ ಸಮಾಧಾನವನ್ನು ನೀಡುವ ಕೇಂದ್ರಗಳಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಧಾನ ಗುರುಕುಟೀರದ ಅಮರದೇವ ಸ್ವಾಮೀಜಿ, ಗುರುಕುಟೀರವು ಕೇವಲ ಭೌತಿಕವಾಗಿ ಕಲ್ಲು ಕಾಂಕ್ರೀಟ್ ಗಳಿಂದಾದ ರಚನೆಯಲ್ಲ. ಇದೊಂದು ಭಾವನಾತ್ಮಕವಾದ ಮನಸ್ಥಿತಿ. ಅಬಲರಿಗೆ, ದುರ್ಬಲರಿಗೆ, ಶೋಷಿತರಿಗೆ, ದುಃಖಿಗಳಿಗೆ ಸಮಾಧಾನ ಅಗತ್ಯ ಕೇಂದ್ರ ಇದಾಗಲಿದೆ.

ಅಶಾಂತ ಬದುಕಿಗೆ ಶಾಂತಿ ನೀಡುವ ಪವಿತ್ರ ಹಾಗೂ ಸುಂದರ ತಾಣವೇ ಸಮಾಧಾನ. ಪುಣ್ಯ ಕ್ಷೇತ್ರದಲ್ಲಿ ಪುಣ್ಯ ಪ್ರಾಪ್ತಿಗಾಗಿ ಈ ಸಮಾಧಾನ ನಿರ್ಮಾಣಗೊಂಡಿದೆ. ಸರ್ವ ಜನ ಹಿತಾಯ, ಸರ್ವ ಜನ ಸುಖಾಯ ಇದು ಸಮಾಧಾನದ ಧ್ಯೇಯವಾಗಿದೆ. ಇಲ್ಲಿ ಬಂದು ಎಲ್ಲರೂ ಸಮಾಧಾನ ಹೊಂದುವಂತಾಗಲಿ ಎಂದು ಆಶಿಸಿದರು.

ಇದನ್ನೂ ಓದಿ: Vastu Tips: ಕೆಟ್ಟ ಶಕ್ತಿ ದೂರ ಮಾಡಿ ಪಾಸಿಟಿವ್‌ ಎನರ್ಜಿ ತುಂಬಲು ಆಫೀಸ್‌ನಲ್ಲಿ ಈ ಗಿಡಗಳನ್ನು ಇಡಿ

ಸಮಾಧಾನದ ಮುಖ್ಯ ರೂವಾರಿಗಳಾದ ಮೌನ ತಪಸ್ವಿ ಜಗದ್ಗುರು ಜಡೆಯ ಶಾಂತಲಿಂಗ ಶಿವಯೋಗಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೂಡಿ ಮಠದ ಸದಾಶಿವ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಚನ್ನವೀರದೇಶಿಕೇಂದ್ರ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಮಾತನಾಡಿದರು.

ತೊಗರ್ಸಿ ಮಳೆ ಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಲಕ್ಕವಳ್ಳಿ ಜೈನ ಮಠದ ಸ್ವಸ್ತಿಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಹಾಗೂ ಗುಡುಗಿನಕೊಪ್ಪದ ಲಿಂಗಪ್ಪ ಶರಣರು ಸಮ್ಮುಖ ವಹಿಸಿದ್ದರು.

ಇದೇ ವೇಳೆ ದಾನಿಗಳಿಗೆ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು. ಗೊಗ್ಗೇಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: Karnataka Weather: ಇನ್ನೆರಡು ದಿನ ಸೂರ್ಯ ನರ್ತನ; ಕಾಡಲಿದೆ ಸೆಕೆ!

ಈ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಅಧ್ಯಕ್ಷ ಬಸವರಾಜ ಬಾರಂಗಿ, ವೀರೇಶ ಗೌಡ, ಎಚ್.ಮಲ್ಲಿಕಾರ್ಜುನಪ್ಪ, ರಾಜುಗೌಡ, ಬಾಸೂರು ಗುರುಪ್ರಸನ್ನ ಗೌಡ, ಅಂಡಿಗೆ ಅಶೋಕ ನಾಯಕ, ಶಿವಲಿಂಗೇಗೌಡ, ಸುಧಾ ಶಿವಪ್ರಸಾದ, ಪ್ರಕಾಶ ತಲಕಾಲುಕೊಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version