ಸೊರಬ: ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮ ಸಮಿತಿಯಿಂದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು (Bull Bullying Festival) ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸುಮಾರು 200 ಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಹೋರಿಗಳು ಮಿಂಚಿನ ಓಟ ಮಾಡಿ ನೋಡುಗಳ ಗಮನ ಸೆಳೆದವು. ಅಖಾಡದಲ್ಲಿ ಹೋರಿಗಳು ಓಡುವುದನ್ನು ನೋಡಲು ನೆರೆಯ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ರೋಮಾಂಚನಗೊಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಲೂನು, ಹೂವು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು.
ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ನಾಳೆ- ನಾಡಿದ್ದು ಮಳೆಗೆ ಬ್ರೇಕ್!
ಅಖಾಡದಲ್ಲಿ ಯಮನೂರು ಕುರುಕ್ಷೇತ್ರ, ಕುಬಟೂರು ಬ್ರಹ್ಮ, ಆನವಟ್ಟಿ ಅಭಿಮನ್ಯು, ಆನವಟ್ಟಿ ಪವರ್ ಸ್ಟಾರ್, ಬ್ಯಾತನಾಳ ಕರ್ನಾಟಕ ಎಕ್ಸ್‌ಪ್ರೆಸ್, ಮಲೆನಾಡು ಚಿನ್ನ, ಶಿವಮೊಗ್ಗದ ಶಿವಲಿಂಗ, ಅಂಬಾರಗೊಪ್ಪದ ಯಜಮಾನ, ಸಮನವಳ್ಳಿ ಒಡೆಯ, ಬೆಟ್ಟದಕೂರ್ಲಿಯ ಲಂಕಾಸುರ, ಬೆಟ್ಟದಹುಲಿ, ಸಾಹುಕಾರ, ವೀರಭದ್ರ, ವಿಕ್ರಂ, ಸಾರಂಗ, ಅಪ್ಪಾಜಿ, ಭೀಷ್ಮ, ಏಳುಕೋಟಿ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.
ಇದನ್ನೂ ಓದಿ: Belagavi Winter Session: ಕೊಬ್ಬರಿಗೆ 1500 ರೂ. ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್ ಘೋಷಣೆ
ಹೋರಿ ಹಬ್ಬ ಆಯೋಜಿಸಿದ್ದ ಬೆಟ್ಟದ ಕೂರ್ಲಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.