ಸೊರಬ: ತಾಲೂಕಿನ ಹಾಲಗಳಲೆ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವು (Bull Bullying Festival) ಬುಧವಾರ ವಿಜೃಂಭಣೆಯಿಂದ ಜರುಗಿತು.
ರೋಮಾಂಚನಕಾರಿ ಹೋರಿ ಹಬ್ಬವನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಹೋರಿ ಪ್ರಿಯರು ಆಗಮಿಸಿದ್ದರು.
ಹೋರಿ ಮಾಲೀಕರು ಹೋರಿಗಳಿಗೆ ಬಗೆ ಬಗೆಯ ಅಲಂಕಾರ ಮಾಡಿ ಬಣ್ಣ ಬಣ್ಣದ ಜೂಲಗಳು, ಕಾಲ್ಗೆಜ್ಜೆ, ಬುಲೂನು, ಅಲಂಕಾರಿಕ ವಸ್ತುಗಳಿಂದ ಹೋರಿಗಳನ್ನು ಅಚ್ಚುಕಟ್ಟಾಗಿ ಶೃಂಗರಿಸಿ ಕಂಗೊಳಿಸುವಂತೆ ಅಲಂಕಾರ ಮಾಡಿದ್ದರು.
ಇದನ್ನೂ ಓದಿ: Energy Efficiency: ಕರ್ನಾಟಕಕ್ಕೆ ಪ್ರತಿಷ್ಠಿತ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ
ಅಖಾಡದಲ್ಲಿ ಶಿಗ್ಗಾ ಸಾರಂಗ, ಇಂಡುವಳ್ಳಿ ಅಗ್ರಜ, ಅಮಟೆ ಕೊಪ್ಪದ ಹುಲಿ, ಆನವಟ್ಟಿ ಅಭಿಮನ್ಯು, ಕುಂಬತ್ತಿ ತುಳಸಿ, ಸೊರಬದ ಹಿಂದೂ ಸಾಮ್ರಾಟ, ಉರುಗನಹಳ್ಳಿ ಗುಳಿ, ಶ್ರೀರಾಮ, ಶಿಗ್ಗಾದ ಕ್ರೇಜಿಸ್ಟಾರ್, ಅಮಟೆ ಕೊಪ್ಪದ ಕಲಾವಿದ, ಏಕಲವ್ಯ, ಮದಕರಿ ಎಕ್ಸಪ್ರೆಸ್, ಸಾರೇಕೊಪ್ಪದ ಸುನಾಮಿನಾಗ, ಕೊಡಕಣಿ ಚಾಡೇಶ್ವರಿ ಎಕ್ಸ್‌ಪ್ರೆಸ್, ನಾನೇ ರಾಜಕುಮಾರ, ಸೊರಬದ ಸೈನಿಕ ಸೇರಿದಂತೆ ವಿವಿಧ ಹೆಸರಿನ ನೂರಾರು ಹೋರಿಗಳು ಓಡಿದವು.
ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಬಿರುಗಾಳಿಯಂತೆ ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.
ಇದನ್ನೂ ಓದಿ: Year Ender 2023 : ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕ್ರೀಡಾ ವೈಭವ ಈ ರೀತಿ ಇತ್ತು
ಹೋರಿ ಹಬ್ಬವನ್ನು ಆಯೋಜಿಸಿದ ಹಾಲಗಳಲೆ ಗ್ರಾಮದ ಶ್ರೀ ಬಸವೇಶ್ವರ ಗೆಳೆಯರ ಬಳಗದವರು ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸುವುದಕ್ಕೆ ಸಹಕರಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದರು. ಉತ್ತಮವಾಗಿ ಓಡಿದ ಹೋರಿಗಳನ್ನು ಮತ್ತು ಬಲಪ್ರದರ್ಶಿಸಿದ ಪೈಲ್ವಾನರನ್ನು ಗುರುತಿಸಲಾಯಿತು.