ಸೊರಬ: ತಾಲೂಕಿನ ಹಳೆಸೊರಬ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸೇವಾ ಸಮಿತಿಯಿಂದ ವಿಶೇಷ ದೀಪಾವಳಿ ಅಂಗವಾಗಿ ರೈತರ ಜನಪದ ಕ್ರೀಡೆಯಾದ ಹೋರಿ ಬೆದರಿಸುವ ಹಬ್ಬವನ್ನು (Bull Bullying Festival) ಸಡಗರ ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.
ಅಖಾಡದಲ್ಲಿ ಹೋರಿಗಳು ಓಡುವುದನ್ನು ನೋಡಲು ನೆರೆಯ ಗ್ರಾಮಗಳನ್ನು ಸೇರಿದಂತೆ ನೆರೆಯ ತಾಲೂಕು ಹಾಗೂ ಪಕ್ಕದ ಜಿಲ್ಲೆಗಳಿಂದ ಹೋರಿ ಅಭಿಮಾನಿಗಳು ಆಗಮಿಸಿದ್ದರು.
ಇದನ್ನೂ ಓದಿ: Budget Session : ಫೆಬ್ರವರಿ 12ರಿಂದ ಜಂಟಿ ಅಧಿವೇಶನ, ಫೆ. 16ರಂದು ರಾಜ್ಯ ಬಜೆಟ್ ಮಂಡನೆ
ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ರೋಮಾಂಚನಗೊಳಿಸಿತ್ತು. ಹೋರಿ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿ ಹಾಗೂ ಹಾರ ಕಟ್ಟಿ ಶೃಂಗರಿಸಿದ್ದರು.
ಹೋರಿ ಹಬ್ಬದ ಆಯೋಜಿಸಿದ್ದ ಹಳೆಸೊರಬ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸೇವಾ ಸಮಿತಿಯವರು ಎರಡು ಬದಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು.
ಇದನ್ನೂ ಓದಿ: Benefits of Consuming Whole Foods: ಸಂಪೂರ್ಣ ಆಹಾರಗಳು ನಮಗೇಕೆ ಬೇಕು?
ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಸನ್ಮಾನಿಸಲಾಯಿತು.