ಸೊರಬ: ತಾಲೂಕಿನ ಮಾವಲಿ ಗ್ರಾಮದ ಹಕ್ಕಲಗೇರಿ ಶ್ರೀ ಶಿವಶಕ್ತಿ ಗ್ರಾಮಾಭಿವೃದ್ಧಿ ಸಮಿತಿಯಿಂದ ವಿಶೇಷ ದೀಪಾವಳಿ ಅಂಗವಾಗಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು (Bull Bullying Festival) ವಿಜೃಂಭಣೆಯಿಂದ ಆಚರಿಸಲಾಯಿತು.
ಅಖಾಡದಲ್ಲಿ ಹೋರಿಗಳು ಓಡುವುದನ್ನು ನೋಡಲು ನೆರೆಯ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ಮೈನವಿರೇಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು.
ಇದನ್ನೂ ಓದಿ: Ravi Bishnoi : ರವಿ ಬಿಷ್ಣೋಯಿಯನ್ನು ಕೊಂಡಾಡಿದ ಲೆಜೆಂಡರಿ ಸ್ಪಿನ್ನರ್
ಅಖಾಡದಲ್ಲಿ ಚಂದ್ರಗುತ್ತಿಯ ಚಂದ್ರಗುತ್ಯಮ್ಮ, ಅರಿಶಿನಗೇರಿ ವೈಭವ, ಮಾವಲಿಯ ಸೋಮ, ಆಯನೂರು ಕಾ ರಾಜ, ಉರುಗನಹಳ್ಳಿ ಗೂಳಿ, ಹಕ್ಕಲಗೇರಿ ಗರುಡ, ಬಾರಂಗಿ ಕೌರವ, ಹಿರೇಜಂಬೂರು ಸಿದ್ಧ, ಚಿಕ್ಕಜಂಬೂರು ಶಬರಿಹುಲಿ, ತಾಳಗುಂದ ವೀರಭದ್ರ, ಮಾವಲಿ ಜೈ ಶ್ರೀರಾಮ, ಅಂಡಿಗೆ ಆರ್.ಎಂ.ಡಿ, ಶಿವಮೊಗ್ಗದ ಶಿವನಂದಿ, ಶಿವಮೊಗ್ಗದ ಹಿಂದೂ ಸಾಮ್ರಾಟ್, ಹೊನ್ನಾಳಿ ವಿರಾಟ್, ಗಾಮದ ಭೀಮಸರ್ಕಾರ್, ಹುಲುಗಿನಕೊಪ್ಪದ ಏಳುಕೋಟಿ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.
ಇದನ್ನೂ ಓದಿ: Football Tournament : ರಿಲಯನ್ಸ್ ಫೌಂಡೇಶನ್ ಟ್ರೋಫಿ ಗೆದ್ದ ಸೇಂಟ್ ಜೋಸೆಫ್ಸ್ ಕಾಲೇಜು
ಹೋರಿ ಹಬ್ಬ ಆಯೋಜಿಸಿದ್ದ ಹಕ್ಕಲಗೇರಿ ಶ್ರೀ ಶಿವಶಕ್ತಿ ಗ್ರಾಮಾಭಿವೃದ್ಧಿ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.