ರಿಪ್ಪನ್‌ಪೇಟೆ: ಗೃಹಿಣಿಯೋರ್ವಳು (Housewife) ಮರವೊಂದಕ್ಕೆ ನೇಣು ಬಿಗಿದುಕೊಂಡು (Hanging) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ರಿಪ್ಪನ್‌ಪೇಟೆ ಸಮೀಪದ ಅರಸಾಳು ರೈಲ್ವೆ ಗೇಟ್ ಬಳಿ ಮಂಗಳವಾರ ಜರುಗಿದೆ.
ಮೃತ ಮಹಿಳೆ ಮಧ್ಯ ಪ್ರದೇಶದ ದಿಂಡೂರಿ ಜಿಲ್ಲೆಯ ಮಡಿಯರಸ್ಟ್ ಪೋಸ್ಟ್ ಡಾನ್ ಬಿಚೋಯ್ ಗ್ರಾಮದ ನಿವಾಸಿ ಊರ್ಮಿಳ ಬಾಯಿ (27) ಎನ್ನಲಾಗಿದೆ.
ಕಳೆದ 15 ದಿನಗಳ ಹಿಂದೆ ರೈಲ್ವೆ ಹಳಿ ಪಕ್ಕದ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ದಿನಗೂಲಿ ಆಧಾರದಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದರು. ಗಂಡ ಸುಕ್ರತ್ ಅವರ ಕುಟುಂಬಸ್ಥರೊಂದಿಗೆ ಬಂದಿದ್ದರು.
ಇದನ್ನೂ ಓದಿ: National Nutrition Week 2023: ಸಿರಿಧಾನ್ಯ ಸೇವನೆಯಿಂದ ಎಷ್ಟೊಂದು ಪ್ರಯೋಜನ! ಸೈಡ್ ಎಫೆಕ್ಟ್ ಇದೆಯಾ?
ಮದುವೆಯಾಗಿ ಏಳು ವರ್ಷ ಕಳೆದರೂ ಮಕ್ಕಳಿಲ್ಲ ಎಂಬ ಚಿಂತೆಯಲ್ಲಿ ಮದ್ಯವ್ಯಸನಿಯಾಗಿದ್ದರು. ಅತಿಯಾದ ಮದ್ಯ ವ್ಯಸನದಿಂದ ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತಳ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.