ಸೊರಬ: ಚಂದ್ರಗುತ್ತಿಯ (Chandragutti) ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದ ಶ್ರೀ ರೇಣುಕಾಂಬ ದೇವಸ್ಥಾನದ (Sri Renukamba Temple) ಹುಂಡಿ ಏಣಿಕೆ (Hundi Count) ಕಾರ್ಯ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ಬುಧವಾರ ನಡೆಯಿತು.
ಚಂದ್ರಗುತ್ತಿ ನಾಡಕಚೇರಿ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ ಎಲ್ ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಶ್ರಾವಣ ಮಾಸದಲ್ಲಿ ಭಕ್ತರ ಮೂಲಕ ಬಂದಂತಹ ಕಾಣಿಕೆ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಯಿತು.
ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ 25,8,680 ರೂ. ಕಾಣಿಕೆ ಸಂಗ್ರಹವಾಗಿದೆ. ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿ ಸಿ ಕ್ಯಾಮೆರಾ ಆಳವಡಿಸಲಾಗಿತ್ತು.
ಇದನ್ನೂ ಓದಿ: Weather report : ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್
ಹುಂಡಿ ಏಣಿಕೆ ಕಾರ್ಯಕ್ಕೆ ಗ್ರಾಪಂ ಉಪಾಧ್ಯಕ್ಷ ಎಂ.ಬಿ ರೇಣುಕಾ ಪ್ರಸಾದ್, ಸದಸ್ಯ ಎಂ.ಪಿ ರತ್ನಾಕರ್ ಭೇಟಿ ನೀಡಿ ಪರಿಶೀಲಿಸಿದರು.
ಹುಂಡಿ ಎಣಿಕೆ ಕಾರ್ಯದಲ್ಲಿ ತಾಲೂಕು ಸಾಮಾನ್ಯ ಭದ್ರತಾ ಯೋಜನೆಯ ಶಿರಸ್ತೆದಾರ್ ನಿರ್ಮಲ ಪ್ರಭಾಕರ್, ವ್ಯವಸ್ಥಾಪನ ಸಮಿತಿ ಸದಸ್ಯ ಅರವಿಂದ್ ಭಟ್, ಮುಜರಾಯಿ ಇಲಾಖೆ ವಿ?ಯ ನಿರ್ವಾಹಕರು, ತಾಲೂಕು ಕಂದಾಯ ಇಲಾಖೆ, ಗ್ರಾಮ ಲೆಕ್ಕಿಗರು ಮತ್ತು ದೇವಸ್ಥಾನದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.