ಸೊರಬ: ದೇಶದ ಸಂಸ್ಕೃತಿ (Culture) ಹಾಗೂ ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ದಂತ ವೈದ್ಯ ಡಾ. ಜ್ಞಾನೇಶ್ (Shivamogga News) ತಿಳಿಸಿದರು.
ತಾಲೂಕಿನ ಯಕ್ಷಿ ಗ್ರಾಮದಲ್ಲಿ ಹುಲಿಯಪ್ಪ ಸ್ವಾಮಿಯ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಯಲಾಟ, ಸಾಮಾಜಿಕ ನಾಟಕ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಜನರಿಗೆ ಉತ್ತಮ ಸಂದೇಶ ನೀಡುವ ಕಾರ್ಯ ಮಾಡುತ್ತಿವೆ ಎಂದರು.
ಇದನ್ನೂ ಓದಿ: Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್ ರೈಲು; ಬೆಲೆ ಎಷ್ಟು?
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಒ.ಬಿ.ರಾಜಶೇಖರ್, ನಾಟಕ ಕಲೆಯ ಕುರಿತು ಮಾತನಾಡಿದರು.
ಇದನ್ನೂ ಓದಿ: Text Book Revision : ಸದ್ದಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ, ಏನೇನು ಬದಲಾವಣೆ?
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಜಿ.ಸೋಮಪ್ಪ, ಗುರುರಾಜ್, ಗುತ್ಯಪ್ಪ, ಈಶ್ವರ, ಸೋಮಶೇಖರ್, ಕೃಷ್ಣಪ್ಪ, ಲಕ್ಷ್ಮಣ, ಬಸವರಾಜ್, ರಾಮಪ್ಪ, ವಿಠ್ಠಪ್ಪ, ಗ್ರಾಮ ಸಮಿತಿ ಅಧ್ಯಕ್ಷ ಬಸಪ್ಪ, ಗಣಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.