Site icon Vistara News

Shivamogga News: ಸದ್ಗುಣ ಅಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ: ಡಾ.ಗುರುನಾಗಭೂಷಣ ಸ್ವಾಮೀಜಿ

Inauguration of the new building of Malavalli Sri Mahalingeshwar and Basavanna Temple

ರಿಪ್ಪನ್‌ಪೇಟೆ: ಬದುಕಿನಲ್ಲಿ ಸದ್ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ. ಬದುಕಿನಲ್ಲಿ ಬಂದಿದ್ದೆಲ್ಲ ಬರಲಿ ಎನ್ನುವುದು ಸಹಜ ಸೂತ್ರ. ಆದರೆ ಏನು ಬರಬೇಕು ಎಂದು ತೀರ್ಮಾನಿಸಿ ಸೃಷ್ಟಿಸಿಕೊಳ್ಳುವುದು ನಿಜವಾದ ಸಾಧನೆ (Achievement) ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ (Shivamogga News) ಹೇಳಿದರು.

ಪಟ್ಟಣದ ಸಮೀಪದ ಮಳವಳ್ಳಿ ಶ್ರೀಮಹಾಲಿಂಗೇಶ್ವರ ಮತ್ತು ಬಸವಣ್ಣ ದೇವಸ್ಥಾನದ ನೂತನ ಕಟ್ಟಡದ ಲೋಕಾರ್ಪಣೆ ಮತ್ತು ಶ್ರೀ ಮಹಾಲಿಂಗೇಶ್ವರ, ಶ್ರೀ ಬಸವಣ್ಣನವರ ಪುನರ್ ಪ್ರತಿಷ್ಠಾಪನೆ, ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀಗಳು ಆಶೀರ್ವಚನ ನೀಡಿದರು.

ಸದ್ಗುಣಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ. ನಾನು-ನನ್ನದು ಎನ್ನುವ ಅಹಂಕಾರ ಭಾವವನ್ನು ಬಿಟ್ಟಾಗಲೇ ಕಲಿಯಲು ಮತ್ತು ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ಇದನ್ನೂ ಓದಿ: Tumkur News: ವಿಜೃಂಭಣೆಯ ಪಾವಗಡದ ಶ್ರೀ ಶನಿ ಮಹಾತ್ಮ ದೇವರ ಬ್ರಹ್ಮರಥೋತ್ಸವ

ಶ್ರೀಮಹಾಲಿಂಗೇಶ್ವರ ಮತ್ತು ಬಸವಣ್ಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನಾಗರಾಜಗೌಡ ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ. ಈಶ್ವರಪ್ಪಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ನವಚೇತನವೇದಿಕೆ ಆಧ್ಯಕ್ಷ ಕೆ.ಎಸ್.ಪ್ರಶಾಂತ್, ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿಗೌಡ, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಮಳವಳ್ಳಿ, ಡಿ.ಈ.ಮಧುಸೂದನ್, ಉಮಾಕರ್, ಕವಿತಾ ಭೀಮರಾಜ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Money Guide: EPF vs PPF; ಈ ಎರಡು ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ವಿವರ

ಶಂಕುತಲ ಪ್ರಾರ್ಥಿಸಿದರು. ಈಶ್ವರಪ್ಪ ಮಳವಳ್ಳಿ ಸ್ವಾಗತಿಸಿದರು. ಸತ್ಯನಾರಾಯಣ ನಿರೂಪಿಸಿದರು.

Exit mobile version