ರಿಪ್ಪನ್‌ಪೇಟೆ: ದುರ್ಗುಣಗಳು ದೂರವಾಗಿ ಸದ್ಗುಣಗಳು ಸರ್ವರಲ್ಲಿ ಪ್ರಾಪ್ತಿಯಾದಾಗ ಮಾತ್ರ ಜಗತ್ತಿನ ಪ್ರತಿಯೊಬ್ಬರೂ ನೆಮ್ಮದಿಯ ಬದುಕನ್ನು ಕಂಡುಕೊಳ್ಳಲು ಸಾಧ್ಯ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ (Shivamogga News) ಹೇಳಿದರು.
ರಿಪ್ಪನ್‌ಪೇಟೆ ಸಮೀಪದ ಮಸರೂರು ಗ್ರಾಮದ ಶ್ರೀವೀರಭದ್ರಸ್ವಾಮಿ ಸೇವಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಇಷ್ಟಲಿಂಗ ರುದ್ರಾಭಿಷೇಕ ಹಾಗೂ ಅರ್ಚನೆಯ ಪ್ರಯುಕ್ತ ಹಮ್ಮಿಕೊಂಡ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮುಖದಲ್ಲಿ ನಗುವಿರಲಿ. ಹೃದಯದಲ್ಲಿ ಪ್ರೀತಿ ಇರಲಿ. ಜೀವನದಲ್ಲಿ ಒಂದು ಗುರಿ ಇರಲಿ.ಆ ಗುರಿಯನ್ನು ಮುಟ್ಟಲು ಸಮರ್ಥ ಗುರುವನ್ನು ಹೊಂದಿರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಫೆ.27, 28ರಂದು ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ; ನೌಕರರ ಸಮ್ಮೇಳನದ ಹಿನ್ನೆಲೆ ಮಂಜೂರು
ಮಸರೂರು ಗ್ರಾಮದ ಶ್ರೀವೀರಭದ್ರಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿಗೌಡ ಕಗ್ಗಲಿ ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಬಿ.ಗಣೇಶ ಗೌಡ, ಕುಣೆಹೊಸೂರು ಕುಮಾರಗೌಡ, ಮಸರೂರು ಎಂ.ಆರ್.ಮುರುಗೇಶಪ್ಪಗೌಡ ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Skincare Tips For Spring: ಋತು ಬದಲಾವಣೆಯಲ್ಲಿ ಚರ್ಮದ ಆರೈಕೆ ಹೇಗಿರಬೇಕು?
ಸುಧಾಕರ ಬೆನವಳ್ಳಿ ಸ್ವಾಗತಿಸಿದರು. ಕಗ್ಗಲಿ ಪ್ರಕಾಶ ನಿರೂಪಿಸಿದರು. ಕೆಂಚನಾಲ ಗಣೇಶ್ ವಂದಿಸಿದರು.