Site icon Vistara News

Shivamogga News: ಕನ್ನಡ ನೆಲ-ಜಲ ವಿಷಯದಲ್ಲಿ ಸಂಘಟನಾತ್ಮಕ ಹೋರಾಟಕ್ಕೆ ಸಿದ್ಧ: ಗೋಪಾಲಕೃಷ್ಣ ಬೇಳೂರು

MLA Gopalakrishna Belur speech in 68th Kannada Rajyotsava celebration at Ripponpet

ರಿಪ್ಪನ್‌ಪೇಟೆ: ಕನ್ನಡ (Kannada) ನೆಲ-ಜಲ, ಗಡಿ, ಭಾಷೆಯ ವಿಷಯ ಬಂದಾಗ ರಾಜಕೀಯ ಪಕ್ಷ (Political Party) ದೂರವಿಟ್ಟು ಧ್ವನಿ ಎತ್ತುವ ಮೂಲಕ, ಸಂಘಟನಾತ್ಮಕ ಹೋರಾಟಕ್ಕೆ ನಾನು ಸದಾ ಸಿದ್ಧ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್ ಆಭಿಮಾನಿ ಬಳಗದ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ನಾಡು ನುಡಿ ಸಂರಕ್ಷಣೆ ವಿಷಯ ಬಂದಾಗ ನಾವು ಸಂಘಟನೆಯಾಗುವುದರೊಂದಿಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದ ಅವರು ಕಲೆ, ಸಾಹಿತ್ಯದ ತವರೂರು ಶಿವಮೊಗ್ಗ ಜಿಲ್ಲೆಯಾಗಿದ್ದು ಕನ್ನಡ ಉಸಿರಾಗಿಸುವ ಸಂಕಲ್ಪ ನಮ್ಮದಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ; ಕರಾವಳಿಗೆ ಯೆಲ್ಲೋ ಅಲರ್ಟ್‌

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ, ಪಿಎಸ್‌ಐ ಪ್ರವೀಣ್ ಎಸ್.ಪಿ. ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಕಸ್ತೂರಿ ಕನ್ನಡ ಸಂಘ, ಪುನೀತ್‌ ರಾಜ್ ಅಭಿಮಾನಿ ಬಳಗದ ಅಧ್ಯಕ್ಷ ಉಲ್ಲಾಸ್ ತೆಂಕೋಲ ಅಧ್ಯಕ್ಷತೆ ವಹಿಸಿದ್ದರು.

ಖ್ಯಾತ ಗಾಯಕರಾದ ಮೆಹಬೂಬ್‌ಸಾಬ್ ಮತ್ತು ಆಶ್ವಿನ್‌ ಶರ್ಮ, ಕು.ಸಾದ್ವಿನಿ ಕೊಪ್ಪ, ಸಾನ್ವಿ ಜಿ. ಭಟ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕಸ್ತೂರಿ ಕನ್ನಡ ಸಂಘದ ಗೌರವಾಧ್ಯಕ್ಷ ಮೆಣಸೆ ಆನಂದ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ. ಈಶ್ವರಪ್ಪಗೌಡ, ಯುವ ಮುಖಂಡ ಕೆ.ಎಸ್.ಪ್ರಶಾಂತ್‌, ಗ್ರಾಮ ಪಂಚಾಯಿತಿ ಸದಸ್ಯ ಡಿ.ಈ. ಮಧುಸೂದನ್, ಎನ್.ಚಂದ್ರೇಶ್, ಜೆಡಿಎಸ್ ಜಿಲ್ಲಾ ಮುಖಂಡ ಜಿ.ಎಸ್.ವರದರಾಜ್, ಅರಸಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮಾಕರ್‌, ಸಂತೋಷ್‌ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Job News : ಅತಿಥಿ ಉಪನ್ಯಾಸಕರ ಸೇವಾ ಅವಧಿ ವಿಸ್ತರಣೆ; ಹೊರಗುತ್ತಿಗೆ ನೌಕರರಿಗೆ ಗುಡ್‌ ನ್ಯೂಸ್‌

ಜಿ.ಆರ್. ಗೋಪಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಣತಿ ಪ್ರಾರ್ಥಿಸಿದರು. ಹಸನಬ್ಬ ಸ್ವಾಗತಿಸಿದರು, ಕಾವ್ಯ ಕಾರ್ಯಕ್ರಮ ನಿರೂಪಿಸಿದರು, ಶ್ರೀಧರ್‌ ವಂದಿಸಿದರು.

Exit mobile version