Site icon Vistara News

Shivamogga News: ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಕಸಾಪ: ಸಾಹಿತಿ ಹ.ಅ. ಪಾಟೀಲ

ರಿಪ್ಪನ್‌ಪೇಟೆಯಲ್ಲಿ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆ.

ರಿಪ್ಪನ್‌ಪೇಟೆ: “ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ ನಾಡು ನುಡಿಯ ಬೆಳವಣಿಗೆಗೆ ಪೂರಕವಾಗಿ ಸದಾಶಯದೊಂದಿಗೆ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಚಾಲನೆ ನೀಡಿದ್ದರು. ಅದೀಗ ಉತ್ತಮ ರೀತಿಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿದೆ” ಎಂದು ಹಿರಿಯ ಸಾಹಿತಿ ಹ.ಅ.ಪಾಟೀಲ (Shivamogga News) ಹೇಳಿದರು.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯಿತಿಯ ಕುವೆಂಪು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಸಾಪ ಸಂಸ್ಥಾಪನಾ ದಿನ ಆಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, “ಸಾಹಿತ್ಯ ಪರಿಷತ್ತು ಪ್ರಾರಂಭವಾದ ದಿನದಿಂದ ಇಂದಿನವರೆಗೆ ಅನೇಕ ಸಾಹಿತಿಗಳು, ಸಂಘಟಕರು, ಕನ್ನಡದ ಪರಿಚಾರಕರು ಈ ಸಂಸ್ಥೆಯ ಪದಾಧಿಕಾರಿಗಳಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಅದರಿಂದಾಗಿ ಸಂಸ್ಥೆ 108 ವರ್ಷ ಮುನ್ನಡೆಯಲು ಸಾಧ್ಯವಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Karnataka Election 2023 : 13 ಕ್ಷೇತ್ರಗಳಲ್ಲಿ ಹಾದು ಹೋದ ಮೋದಿ ರೋಡ್‌ ಶೋ; ಬೆಂಗಳೂರಿನಾದ್ಯಂತ ಸಂಚಲನ

ಪ್ರತಿಯೊಬ್ಬ ನಾಗರಿಕರು ಭಾಷಾ ಅಭಿಮಾನ ಹೊಂದಲಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಎನ್. ಮಂಜುನಾಥ ಕಾಮತ್ ಮಾತನಾಡಿ, “ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಮೂಲ ಉದ್ದೇಶ ನಾಡು, ನುಡಿ, ಭಾಷೆ, ನೆಲ, ಜಲದ ಸಂರಕ್ಷಣೆಯೊಂದಿಗೆ ಕನ್ನಡ ನಾಡನ್ನು ಅಭಿವೃದ್ಧಿಯತ್ತ ಸಾಗುವಂತೆ ಮಾಡುವುದಾಗಿದೆ. ನಮ್ಮ ನಾಡಿನ ಪ್ರತಿಯೊಬ್ಬ ನಾಗರಿಕರು ಭಾಷಾ ಅಭಿಮಾನವನ್ನು ಹೊಂದುವುದರ ಜತೆಗೆ ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸಿದಾಗ ನಮ್ಮ ಕನ್ನಡ ನಾಡು ಭಾರತದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯವಾಗಲಿದೆ” ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ತ.ಮ. ನರಸಿಂಹ ವಹಿಸಿದ್ದರು. ಕಾರ್ಯಕ್ರಮದ ಮೊದಲಲ್ಲಿ ಕಸಾಪ ಹೋಬಳಿ ಸಮಿತಿಯ ಕಾರ್ಯದರ್ಶಿ ಪಿಯೂಸ್‌ ರೋಡ್ರಿಗಸ್ ಪ್ರಾರ್ಥಿಸಿದರು. ಕಸಾಪ ಹಿರಿಯ ಸದಸ್ಯ ಹಸನಬ್ಬ ಸ್ವಾಗತಿಸಿ, ಪಿಯೂಸ್ ರೋಡ್ರಿಗಸ್ ವಂದಿಸಿದರು.

Exit mobile version