ಸೊರಬ: ತಾಲೂಕಿನ ಚಂದ್ರಗುತ್ತಿಯ ಶ್ರೀ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ಶ್ರೀ ಮಡಿವಾಳ ಮಾಚಿದೇವ ಸೇವಾ ಸಮಿತಿಯಿಂದ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು (Madivala Machideva Jayanti) ಆಚರಿಸಲಾಯಿತು.
ಶ್ರೀ ಮಡಿವಾಳ ಮಾಚಿದೇವರಿಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು, ಜಯಂತ್ಯುತ್ಸವದ ಅಂಗವಾಗಿ ದೇವಸ್ಥಾನಕ್ಕೆ ಪುಷ್ಪಾಲಂಕಾರ, ಬಾಳೆ ಕಂಬ, ತಳಿರು-ತೋರಣಗಳ ಅಲಂಕಾರ ಮಾಡಲಾಗಿತ್ತು, ನಂತರ ಮಡಿವಾಳ ಸಮಾಜದವರು ಮಾಚಿದೇವರಿಗೆ ಪೂಜೆ ಸಲ್ಲಿಸಿ, ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು.
ಇದನ್ನೂ ಓದಿ: Stock Market: 440 ಅಂಕ ಜಿಗಿದ ಸೆನ್ಸೆಕ್ಸ್, ನಿಫ್ಟಿ 156 ಪಾಯಿಂಟ್ ಏರಿಕೆ
ತಾಪಂ ಮಾಜಿ ಸದಸ್ಯ ಎನ್.ಜಿ ನಾಗರಾಜ್ ಮಾತನಾಡಿ, ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ಸೊರಬ ತಾಲೂಕಿನ ಕರಡಿಗೆರೆ ಮಡಿವಾಳರ ಸಮುದಾಯ ಭವನದಲ್ಲಿ ಫೆಬ್ರುವರಿ 4 ರಂದು ಭಾನುವಾರ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಸಚಿವ ಎಸ್ ಮಧು ಬಂಗಾರಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ, ಶ್ರೀ ಜಗದ್ಗುರು ಡಾ. ಬಸವ ಮಾಚಿದೇವ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಮಡಿವಾಳ ಸಮಾಜದ ಬಾಂಧವರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Job Alert: ಪದವಿ ಪೂರೈಸಿದವರಿಗೆ ಉದ್ಯೋಗಾವಕಾಶ; ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಮಡಿವಾಳ ಮಾಚಿದೇವ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ಅಂಚೆ, ಸಮಾಜದ ಪ್ರಮುಖರಾದ ಎನ್ ಗುತ್ಯಪ್ಪ, ಪರಸಪ್ಪ ಓಲೇಕರ್, ಎನ್.ಜಿ ನಾಗರಾಜ್, ಎಂ.ಪಿ ರತ್ನಾಕರ್, ಗಣೇಶ್ ಮರಡಿ, ಮನೋಹರ, ಕೃಷ್ಣಪ್ಪ, ಗಂಗಾಧರ, ಹನುಮಂತಪ್ಪ, ಗಣಪತಿಪ್ಪ, ಕರಿಯಪ್ಪ, ರಾಘವೇಂದ್ರ, ಅಚ್ಚುತ, ಕೃಷ್ಣಪ್ಪ, ಎಂ.ಜಿ ಗಣಪತಿ, ಸುನಿಲ್, ರಾಕೇಶ್, ಶರತ್, ಭರತ್ ಎಂ.ಕೆ, ವಿಶಾಲ್, ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು, ಪಾಲ್ಗೊಂಡಿದ್ದರು.