ರಿಪ್ಪನ್‌ಪೇಟೆ: ಧಾರ್ಮಿಕ ಮತ್ತು ಚಾರಿತ್ರಿಕ ಉತ್ಕೃಷ್ಟ ಪರಂಪರೆಯು ನಮ್ಮ ಸಂಸ್ಕೃತಿಯ (Culture) ಭಾಗವೇ ಅಗಿದೆ. ರಾಷ್ಟ್ರದ ಸಂಸ್ಕೃತಿ ಸಂವರ್ಧನೆ ಧರ್ಮ ಪೀಠಗಳ ಪರಮ ಕರ್ತವ್ಯವಾಗಿದೆ ಎಂದು ಆನಂದಪುರಂ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಸಮೀಪದ ಕೋಣಂದೂರು ಶ್ರೀ ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಆಯೋಜಿಸಲಾಗಿದ್ದ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಇದನ್ನೂ ಓದಿ: Stock Market: 73 ಸಾವಿರ ಅಂಕ ದಾಟಿದ ಸೆನ್ಸೆಕ್ಸ್; ವಿಪ್ರೋ, ಟಿಸಿಎಸ್ ಷೇರು ಏರಿಕೆ
ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಶಿವಲಿಂಗೇಶ್ವರ ನಿತ್ಯ ಪಂಚಾಂಗವನ್ನು ಬಿಡುಗಡೆಗೊಳಿಸಿ, ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಠದಿಂದ ಕೊಡಮಾಡುವ ಶ್ರೀಶಿವಲಿಂಗಶ್ರೀ ಪ್ರಶಸ್ತಿಗೆ ಭಾಜನರಾದ ನಾಟಿ ವೈದ್ಯ ಶಿವಣ್ಣ ಗೌಡ್ರು ಮತ್ತು ಅಕ್ಷಯ ಬ್ಯಾಂಕ್ ಆಧ್ಯಕ್ಷ ದಿನೇಶ್ ತಟ್ಟೆಕೊಪ್ಪ ಹಾಗೂ ರಾಣೆಬೆನ್ನೂರು ಸೋಮಶೇಖರ ಈರಪ್ಪ ಹಿರೇಬಿದರಿ ಹಾಗೂ ರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾಗಿ ಭಾಗವಹಿಸಿದ ಕುಕ್ಕಳಲೇ ಶ್ರೀ ಜ್ಞಾನ ನಾಗಭೂಷಣ ಅವರಿಗೆ ಗುರುರಕ್ಷೆ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.
ಧರ್ಮ ಸಮಾರಂಭದಲ್ಲಿ ಕ್ಯಾಸನೂರು ತೊಗರ್ಸಿ ಮಠದ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ, ತೊಗರ್ಸಿ ಶ್ರೀ ಮಹಾಂತದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಜಡೆಮಠದ ಶ್ರೀ ಮಹಾಂತ ಸ್ವಾಮೀಜಿ, ಮುಷ್ಟೂರು ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಜಡೆಮಠದ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುತ್ತಲ ಕಲ್ಮಠದ ಶ್ರೀ ಪ್ರಭು ಸ್ವಾಮೀಜಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಕೋಣಂದೂರು ಕೆ.ಆರ್. ಪ್ರಕಾಶ, ಎಪಿಎಂಸಿ ಮಾಜಿ ಅಧ್ಯಕ್ಷ ಹಾರೋಹಿತ್ತಲು ಈಶ್ವರಪ್ಪ ಗೌಡ, ವಾಗೀಶ್ ಸ್ವಾಮಿ, ಮುರುಗೇಂದ್ರ ತ್ಯಾರಂದೂರು, ಬೆಳಕೋಡು ಹಾಲಸ್ವಾಮಿ ಗೌಡ, ದೇವೇಂದ್ರಪ್ಪ ಗೌಡ ನೆವಟೂರು, ಚಂದ್ರಶೇಖರಪ್ಪ ಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಹೊನ್ನಾಳಿ ಡಾ. ವಿದುಷಿ ಪ್ರತಿಮ ನಿಜಗುಣಶಿವಯೋಗಿಸ್ವಾಮಿ ಅವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: Most Ducks : ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿ ಇಲ್ಲಿದೆ
ಜೆ.ಜಿ.ಸದಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಮೇಘನಾ ಕಾಳಶೆಟ್ಟಿಕೊಪ್ಪ ಪ್ರಾರ್ಥಿಸಿದರು, ಬೆಳಕೋಡು ಹಾಲಸ್ವಾಮಿಗೌಡ ಸ್ವಾಗತಿಸಿದರು. ಗೀತಾ ವಿ.ಮಠದ ಶಿವಯೋಗಿ ನಿರೂಪಿಸಿದರು.