ಸೊರಬ: ತಾಲೂಕಿನ ಗೆಂಡ್ಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ (Shivamogga News) ಮಕ್ಕಳ ಸಂತೆಯು ಎಲ್ಲರ ಗಮನ ಸೆಳೆಯಿತು.
ಮಕ್ಕಳಲ್ಲಿ ವ್ಯವಹಾರ ಕೌಶಲವನ್ನು ವೃದ್ಧಿಸುವುದರ ಜತೆಗೆ ಗಣಿತದ ಮೂಲ ಕಲ್ಪನೆಗಳನ್ನು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಮಕ್ಕಳ ಸಂತೆಯಲ್ಲಿ ತಾಜಾ ತರಕಾರಿಗಳನ್ನು ಮಕ್ಕಳು ಅತ್ಯಂತ ಉತ್ಸಾಹದಿಂದ ಮಾರಾಟ ಮಾಡುವಲ್ಲಿ ನಿರತರಾಗಿದ್ದು ಕಂಡು ಬಂದಿತು. ಪೋಷಕರು, ಸಾರ್ವಜನಿಕರು ಮಕ್ಕಳ ಸಂತೆಗೆ ಆಗಮಿಸಿ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಹುರಿದುಂಬಿಸಿದರು.
ಇದನ್ನೂ ಓದಿ: KAS: ಕೆಎಎಸ್ ನೇಮಕಕ್ಕೆ ದಿನಗಣನೆ ಶುರು; 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕ
ಸಂತೆಯಲ್ಲಿ ತರಕಾರಿ, ಸೊಪ್ಪು, ಹಣ್ಣುಗಳು, ದಿನಸಿ ವಸ್ತು, ಸ್ವಚ್ಛ ಹಾಗೂ ಪರಿಶುದ್ಧ ತಿಂಡಿ-ತಿನಿಸುಗಳು ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ತಂದು ಅವುಗಳ ಪ್ರಚಾರ ಮಾಡುತ್ತಾ ಬಿರುಸಿನ ವ್ಯಾಪಾರದ ಅನುಭವ ಪಡೆದರು.
ವಿದ್ಯಾರ್ಥಿಗಳು ಸಂತೆ ಮೇಳದಲ್ಲಿ ವಿಶೇಷವಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಗಮನಾರ್ಹವಾಗಿತ್ತು. ಇದನ್ನು ಗಮನಿಸಿದ ಪೋಷಕರು, ಗ್ರಾಮಸ್ಥರು, ಸಂತೆ ಮೇಳದಲ್ಲಿ ಖರೀದಿಗೆ ಬಂದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Tarini Movie Kannada: ರಾಜಸ್ಥಾನ್ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ “ತಾರಿಣಿ”
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಜಿ. ಯಶೋಧಾ, ಮುಖ್ಯಗುರು ಸಿದ್ದಪ್ಪ, ಶಿಕ್ಷಕ ಬಸವರಾಜಪ್ಪ ಅರಣ್ಯ ಇಲಾಖೆ ನಿವೃತ್ತ ಅರಣ್ಯ ರಕ್ಷಕ ರಾಮಪ್ಪ ಜಡ್ಡಳ್ಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜಪ್ಪ, ಗ್ರಾಮಸ್ಥರಾದ ವಿರೇಶ್, ವೀರಭದ್ರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.