ಸೊರಬ: ಗ್ರಾಮೀಣ ಕ್ರೀಡೆಗಳ (Sports) ಉಳಿವು ಮತ್ತು ಬೆಳವಣಿಗೆಗೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ ಎಂದು ಬೆನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಮಾರ್‍ಯಪ್ಪ ಹೇಳಿದರು.
ಚಂದ್ರಗುತ್ತಿ ಸಮೀಪದ ಪುರದೂರು ಗ್ರಾಮದಲ್ಲಿ ಶ್ರೀ ನಂದಿಕೋಲು ಬಸವೇಶ್ವರ ಗೆಳೆಯರ ಬಳಗದಿಂದ ಏರ್ಪಡಿಸಿದ್ದ 2ನೇ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಹತ್ವ ಪಡೆಯಬೇಕಾಗಿದೆ ಎಂದ ಅವರು, ಕಬಡ್ಡಿಯಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳು ಸೋಲು ಗೆಲುವನ್ನು ಸರಿ ಸಮಾನವಾಗಿ ಸ್ವೀಕರಿಸಬೇಕು. ಜತೆಗೆ ಗ್ರಾಮೀಣ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದರು.
ಇದನ್ನೂ ಓದಿ: Corona Virus News: ಮಂಗಳವಾರ 74 ಮಂದಿಗೆ ಕೊರೊನಾ, ಇಬ್ಬರ ಸಾವು
ಪ್ರಮುಖರಾದ ಹಿರಿಯಣ್ಣ ಕಲ್ಲಂಬಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಧು ಬಂಗಾರಪ್ಪ ಅಭಿಮಾನಿ ಬಳಗದವರು ನೆರವೇರಿಸಿದರು. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಪಿ. ನಾರಾಯಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಂದಿಕೋಲು ಬಸವೇಶ್ವರ ಗೆಳೆಯರ ಬಳಗದವರು ಹಾಗೂ ಪುರದೂರು ಗ್ರಾಮಸ್ಥರು ಕಬ್ಬಡ್ಡಿ ಪಂದ್ಯಾವಳಿಗೆ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಸುನಿಲ್ ಗೌಡ್ರು, ಪುರದೂರು ಗ್ರಾಪಂ ಸದಸ್ಯ ಈರಪ್ಪಯ್ಯ, ಪ್ರಶಾಂತ ನಾಯ್ಕ್, ಸದಾನಂದ ಗೌಡ, ರಾಘವೇಂದ್ರ, ರಮೇಶ್ ಪುರದೂರು, ವೈ.ಬಿ. ತಿಮ್ಮಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಿಸಿ; ಸಿಎಂಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ
ನಂತರ ನಡೆದ ಪಂದ್ಯಾವಳಿಯಲ್ಲಿ ಚೌಡೇಶ್ವರಿ ಗೆಳೆಯರ ಐಗೋಡು ತಂಡ, ಶ್ರೀ ನಂದಿಕೋಲು ಬಸವೇಶ್ವರ ಗೆಳೆಯರ ಬಳಗ ಪುರದೂರು ತಂಡ, ಶ್ರೀ ಮಾರಿಕಾಂಬ ತೆಲಗುಂದ್ಲಿ ತಂಡ, ಬಸವೇಶ್ವರ ಗೆಳೆಯರ ಬಳಗ ಪುರದೂರು ತಂಡ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಚತುರ್ಥ ಬಹುಮಾನವನ್ನು ಪಡೆದವು.