Site icon Vistara News

Shivamogga News: ಜೆಜೆಎಂ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

MLA Gopalakrishna Beluru Bhoomi puja for JJM work

ರಿಪ್ಪನ್‌ಪೇಟೆ: ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಹಿತ್ತಲು ಮತ್ತು ಬೆಳ್ಳೂರು ಗ್ರಾಮಗಳಿಗೆ 6.12 ಕೋಟಿ ರೂ ವೆಚ್ಚದ ಜಲಜೀವನ್ ಮಿಷನ್‌ ಯೋಜನೆ (JJM) ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ (Shivamogga News) ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಯ ಪೂರ್ವದಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಬಜೆಟ್‌ಗೆ ಮುನ್ನವೇ ಕ್ಷೇತ್ರದ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳ ಕುರಿತು ಕ್ಷೇತ್ರದ ಮತದಾರರು ಮತ್ತು ಪಕ್ಷದ ಮುಖಂಡರೊಂದಿಗೆ ಸಮಾಲೋಚಿಸಿ ಅಗತ್ಯ ಇರುವ ಕಡೆಗೆ ಆದ್ಯತೆಯ ಮೂಲಕ ಸರ್ಕಾರದಿಂದ ಅನುದಾನ ಕೋರಿ ಮನವಿ ಮಾಡಿದ ಮೇರೆಗೆ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

ಇದನ್ನೂ ಓದಿ: Sachin Tenulkar : ಒಡಿಐನಲ್ಲಿ ಸಚಿನ್​ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು

ಕುಡಿಯುವ ನೀರಿನ ಸಮಸ್ಯೆ ಉದ್ಭವವಾದಲ್ಲಿ ಯಾವುದೇ ಕಾರಣವನ್ನು ನೀಡದೆ ತಕ್ಷಣ ಗ್ರಾಮಾಡಳಿತ ತುರ್ತು ಬೋರ್‌ವೆಲ್ ತೆಗೆಸಲು ಟಾಸ್ಕಾಪೋರ್ಸ್‌ನಲ್ಲಿ ಅಥವಾ ತುರ್ತು ಪರಿಹಾರ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಉಂಡಗೋಡು ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: Viral Video: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ಆಹಾರ ಪೊಟ್ಟಣದ ಮೇಲೆ ಜಿರಳೆ ನರ್ತನ!

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ. ಈಶ್ವರಪ್ಪಗೌಡ, ಅರಸಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೇವರಾಜ, ಸದಸ್ಯರಾದ ಉಮಾಕರ, ಯೋಗೇಂದ್ರ, ಉಮೇಶ, ಅರುಣ್ ಅರಸಾಳು, ನಾಗಪ್ಪ, ಸೋಮಶೇಖರ್ ಹಾಗೂ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ, ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ಹಾಗೂ ಪಕ್ಷದ ಮುಖಂಡರುಗಳಾದ ಹರ್ಷ, ರವೀಂದ್ರ, ಸಣ್ಣಕ್ಕಿ ಮಂಜು, ಶ್ರೀಧರ್, ವಾಸುದೇವ್‌, ರಘುಪತಿ ಸೇರಿದಂತೆ ಇತರರು ಹಾಜರಿದ್ದರು.

Exit mobile version