ರಿಪ್ಪನ್‌ಪೇಟೆ: ಪಟ್ಟಣದ ಶಿವಮೊಗ್ಗ ರಸ್ತೆಯ ಖಾಸಗಿ ಆಸ್ಪತ್ರೆಯ ಮುಂಭಾಗ ತಾಯಿಯೇ (Mother) ಹೆತ್ತಮಕ್ಕಳಿಗೆ ಭಿಕ್ಷಾಟನೆ (Begging) ಮಾಡುವಂತೆ ಒತ್ತಾಯಿಸುತ್ತಿದ್ದ ಘಟನೆ ನಡೆದಿದ್ದು, ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್, ಭಿಕ್ಷಾಟನೆಗೆ ಒತ್ತಾಯಿಸುತ್ತಿದ್ದ ತಾಯಿಗೆ ತಿಳಿವಳಿಕೆ ಮೂಡಿಸಿ, ಎಚ್ಚರಿಕೆ ನೀಡಿದ್ದಾರೆ.
ಹೆತ್ತಮಕ್ಕಳಿಗೆ ಭಿಕ್ಷಾಟನೆ ಮಾಡುವಂತೆ ಮಗನ ಕೈಗೆ ತಟ್ಟೆಕೊಟ್ಟು ಒತ್ತಾಯದಿಂದ ಭಿಕ್ಷೆ ಬೇಡುವಂತೆ ತಾಯಿಯೆ ಚಿಕ್ಕ ಮಕ್ಕಳನ್ನು ಅಣಿಗೊಳಿಸುತ್ತಿದ್ದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್, ಭಿಕ್ಷಾಟನೆಗೆ ಒತ್ತಾಯಿಸುತ್ತಿದ್ದ ತಾಯಿಗೆ ತಿಳುವಳಿಕೆ ಮೂಡಿಸಿ, ಎಚ್ಚರಿಕೆ ನೀಡಿದ್ದಾರೆ.
ಭಿಕ್ಷಾಟನೆ ಮಾಡುವುದು ಅಕ್ಷಮ್ಯ ಅಪರಾಧ. ಇನ್ನು ಮುಂದೆ ಹೀಗೆ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ತಾಯಿಗೆ ಎಚ್ಚರಿಕೆ ನೀಡಿ, ಇಂದಿನಿಂದಲೇ ತಮ್ಮ ಮಗುವನ್ನು ಶಾಲೆಗೆ ಸೇರಿಸುವಂತೆ ಪಿಎಸ್ಐ ಪ್ರವೀಣ್ ಕುಮಾರ್ ಸೂಚಿಸಿದರು.
ಇದನ್ನೂ ಓದಿ: Cycling Benefits: ಒಂದಷ್ಟು ಹೊತ್ತು ಸೈಕಲ್ ಹೊಡೆಯಿರಿ, ಉತ್ತಮ ಆರೋಗ್ಯ ಖಚಿತ!
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್. ಕೃಷ್ಣಪ್ಪ, ದೇವರಾಜ್, ಪರಶುರಾಮ, ಧರ್ಮರಾಜ್ ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.