ಸೊರಬ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಬಡವರ ಹಸಿವನ್ನು ನೀಗಿಸಲು ಪ್ರತಿ ಕುಟುಂಬಕ್ಕೆ ಈಗಾಗಲೇ ಉಚಿತವಾಗಿ 5 ಕೆ.ಜಿ ಪಡಿತರ ಅಕ್ಕಿ ನೀಡುತ್ತಿದ್ದು, ಅತ್ಯಂತ ಕಡಿಮೆ ದರದಲ್ಲಿ ಅಕ್ಕಿಯನ್ನು ನೀಡುವ ಉದ್ದೇಶದಿಂದ ಭಾರತ್ ರೈಸ್ (ಅಕ್ಕಿ) (Bharat Rice) ಅನ್ನು ಜಾರಿಗೆ ತರಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (Shivamogga News) ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಸೋಮವಾರ ಭಾರತ್ ರೈಸ್ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ: Cardiopulmonary Resuscitation: ಜೀವರಕ್ಷಕ ಸಿಪಿಆರ್; ಈ ವಿಧಾನ ಅನುಸರಿಸಿ, ಜೀವ ಉಳಿಸಿ
ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಉಚಿತವಾಗಿ ಅಕ್ಕಿ ನೀಡುತ್ತೇವೆ ಎಂದು ಹೇಳಿ ಈಗ ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನೇ ತಮ್ಮದೆಂದು ಬಿಂಬಿಸಿಕೊಳ್ಳಲು ಹೊರಟಿರುತ್ತಾರೆ. 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುತ್ತಿದೆ ಬರಗಾಲದ ಈ ಸಂದರ್ಭದಲ್ಲಿ ಇವರು ನೀಡುವ ಹಣದಿಂದ ಬಡವರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸಾಧ್ಯವೇ ? ಎಂದ ಅವರು, ಬಡವರ ಹಿತ ಕಾಪಾಡಲು ಕೇಂದ್ರ ಸರ್ಕಾರವು ಗರೀಭ್ ಕಲ್ಯಾಣ ಯೋಜನೆ, ಹತ್ತು ಕೋಟಿ ಕುಟುಂಬಗಳಿಗೆ ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ನೀಡಲಾಗುತ್ತಿದೆ, ಹನ್ನೆರಡು ಕೋಟಿ ಶೌಚಾಲಯ ನಿರ್ಮಾಣ ಮಾಡುವ ಮೂಲಕ ಮೂಲಭೂತ ಸೌಕರ್ಯಗಳನ್ನು ತಲುಪಿಸುವಲ್ಲಿ ಮುಂದಾಗಿದೆ ಹಾಗೂ ಹದಿನಾಲ್ಕು ಕೋಟಿ ಮನೆಗಳಿಗೆ ಜಲ ಜೀವನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ ಆಯುಷ್‌ಮಾನ್ ಯೋಜನೆಯಡಿ 80 ಕೋಟಿ ಜನರಿಗೆ ಸೌಲಭ್ಯ ತಲುಪಿಸಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: DA Hike: ತುಟ್ಟಿ ಭತ್ಯೆ ಶೇ. 3.75 ಏರಿಕೆ; ರಾಜ್ಯ ಸರ್ಕಾರಕ್ಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೃತಜ್ಞತೆ
ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ್ ತಲಕಾಲಕೊಪ್ಪ, ಶಿವಕುಮಾರ್ ಕಡಸೂರು, ಪ್ರಕಾಶ್ ಆಗಸನಹಳ್ಳಿ, ಎಂ.ಡಿ. ಉಮೇಶ್, ಎ.ಎಲ್.ಅರವಿಂದ್, ಬಸವರಾಜ್, ಅಶೋಕ್ ನಾಯಕ್ ಅಂಡಿಗೆ, ಮಲ್ಲಿಕಾರ್ಜುನ ಗುತ್ತೇರ, ಗಜಾನನ ರಾವ್, ವಿಜಯೇಂದ್ರ ಕುಮಾರ್,ರಾಜು ಮಾವಿನ ಬಳ್ಳಿ ಕೊಪ್ಪ, ಶಿವಯೋಗಿ, ನಿರಂಜನ್,ಗುರುಪ್ರಸನ್ನ ಗೌಡ, ಈಶ್ವರ ಚನ್ನಪಟ್ಟಣ, ಪರಶುರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.