ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗೇಂದ್ರಸ್ವಾಮಿಯ ಹನ್ನೆರಡನೇ ಪ್ರತಿಷ್ಠಾವರ್ಧಂತಿ ಉತ್ಸವ ಮತ್ತು ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ (Shivamogga News) ಜರುಗಿತು.
ನಾಗೇಂದ್ರಸ್ವಾಮಿಯ ಸನ್ನಿಧಿಯಲ್ಲಿ ದೇವತಾ ಪ್ರಾಥ್ನೆ ಪೂಜೆ, ದೇವನಾಂದಿ, ಪ್ರಧಾನ ಸಂಕಲ್ಪ, ಮಹಾಗಣಪತಿ ಹವನ, ಸಪರಿವಾರ ಗಣಗಳಿಗೆ ಮೂಲಮಂತ್ರ ಹವನ ಹಾಗೂ ಪ್ರಾಯಶ್ಚಿತ್ತ ಹವನಗಳು ಶ್ರೀಸ್ವಾಮಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಸಂಜೆ ಪ್ರಾಸಾದ ಶುದ್ಧಿ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಗುರುವಂದನೆ, ಗಣಪತಿ ಪೂಜಾ, ನಾಗ ಮೂಲಮಂತ್ರ ಹವನ, ಸರ್ವ ಸೂಕ್ತ ಹವನ, ಕಲಾತತ್ವ ಹವನ, ಮಹಾಪೂರ್ಣಾಹುತಿ, ಬ್ರಹ್ಮ ಕಳಶಾಭಿಷೇಕ, ಮಹಾಪೂಜೆ, ವಿಪ್ರಾರಾಧನೆ, ಮಹಾಮಂತ್ರಾಕ್ಷತೆ, ಮಹಾಮಂಗಳಾರತಿ, ಮಹಾಅನ್ನಪ್ರಸಾದ ಸಂತರ್ಪಣೆ ಜರುಗಿತು.
ಇದನ್ನೂ ಓದಿ: Karnataka Election : ಶಿವಮೊಗ್ಗದಲ್ಲಿ ಭರ್ಜರಿ ಬೇಟೆ; ಎಟಿಎಂ ವಾಹನಗಳಲ್ಲಿ ದಾಖಲೆ ಇಲ್ಲದ 9.15 ಕೋಟಿ ರೂ. ವಶಕ್ಕೆ
ಈ ಸಂದರ್ಭದಲ್ಲಿ ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಸತೀಶ ಗೇರುಗಲ್ಲು, ಎಚ್.ಎಂ.ವರ್ತೇಶ್, ಇನ್ನಿತರ ಧರ್ಮದರ್ಶಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.