ಸೊರಬ: ತಾಲೂಕಿನ ಅಂಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ (Election) ಶಾಂತಪ್ಪ ಶಾಂತಗೇರಿ ಅಧ್ಯಕ್ಷರಾಗಿ, ರಾಘವೇಂದ್ರ ಉರಗನಹಳ್ಳಿ ಉಪಾಧ್ಯಕ್ಷರಾಗಿ ಅವಿರೋಧವಾಗಿ (Shivamogga News) ಆಯ್ಕೆಯಾದರು.
12 ನಿರ್ದೇಶಕರ ಬಲ ಹೊಂದಿದ ಸಂಘದಲ್ಲಿ ಅಧ್ಯಕ್ಷ ಗಾದಿಗೆ ಶಾಂತಪ್ಪ ಶಾತಗೇರಿ, ಉಪಾಧ್ಯಕ್ಷ ಗಾದಿಗೆ ರಾಘವೇಂದ್ರ ಉರಗನಹಳ್ಳಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ಬಾಡಿ ಬಿಲ್ಡಿಂಗ್‌ಗಾಗಿ 39 ನಾಣ್ಯ, 37 ಮ್ಯಾಗ್ನೆಟ್ ನುಂಗಿದ ವ್ಯಕ್ತಿ; ಮುಂದೇನಾಯ್ತು?
ಚುನಾವಣ ಅಧಿಕಾರಿಯಾಗಿ ಪ್ರಕಾಶ್ ಕಾರ್ಯನಿರ್ವಹಿಸಿದರು. ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಶರಣಪ್ಪ, ಸಂಘದ ಕಾರ್ಯದರ್ಶಿ ಶಿವಾನಂದ್ ಸಹಕರಿಸಿದರು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಶಾಂತಪ್ಪ ಶಾತಗೇರಿ, ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕಾರಿಗಳು ಹಾಗೂ ಷೇರುದಾರರ ಸಹಕಾರ ಅಗತ್ಯವಾಗಿದೆ. ಸಂಘ ಹಾಗೂ ಷೇರುದಾರರ ಹಿತಕಾಯುವಂತ ರೀತಿಯಲ್ಲಿ ಆಡಳಿತ ನಡೆಸಲಾಗುವುದು ಎಂದರು.
ಇದನ್ನೂ ಓದಿ: Actor Rajinikanth: ಬಾಲಿವುಡ್ ಖ್ಯಾತ ನಿರ್ಮಾಪಕರೊಂದಿಗೆ ಕೈ ಜೋಡಿಸಿದ ರಜನಿಕಾಂತ್; ತಲೈವಾ ಹೊಸ ಚಿತ್ರ ಯಾವಾಗ?
ಈ ಸಂದರ್ಭದಲ್ಲಿ ಅಂಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಎಚ್.ಈರಪ್ಪ ಕೊಡಕಣಿ, ಗಣಪತಿ ದೇವತಿಕೊಪ್ಪ, ಕೆ.ಪಿ.ಷಣ್ಮುಖಪ್ಪ ಅಂಡಿಗೆ, ಪ್ರಕಾಶ್‍ಗೌಡ ಹಿರಿಯಾವಲಿ, ಹನುಮಂತಪ್ಪ ಕೊಡಕಣಿ, ಅಬ್ದುಲ್ ಜಬ್ಬರ್ ಸಾಬ್ ಅಂಡಿಗೆ, ಎಚ್.ಶಿವಪ್ಪ ಹಿರಿಯಾವಲಿ, ಪುಟ್ಟಮ್ಮ ಶಾಂತಗೇರಿ ಹಾಗೂ ವಿನಾಯಕ, ಸಹಾಯಕಿ ಸಹನ, ಅಂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎಸ್.ಹೇಮಚಂದ್ರ, ಅಶೋಕ್ ನಾಯಕ್ ಅಂಡಿಗೆ, ಹೊಳೆಯಪ್ಪ ದೇವತಿಕೊಪ್ಪ ಹಾಗೂ ಇತರರು ಉಪಸ್ಥಿತರಿದ್ದರು.