ಸೊರಬ: ಸಮಾಜದಲ್ಲಿ ಮಠ- ಮಂದಿರಗಳು ಅಧ್ಯಾತ್ಮದ ಸಂದೇಶವನ್ನು ಸಾರುವ ಜತೆಗೆ ಸಾಮಾಜಿಕವಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (Shivamogga News) ಹೇಳಿದರು.
ಪಟ್ಟಣದ ಚಾಮರಾಜಪೇಟೆಯ ಕಾನುಕೇರಿ ಮಠದಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್ ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ನಿರ್ಮಾಣವಾದ ನೂತನ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Vijayanagara News: ʼವಿರೂಪಾಕ್ಷ ದೇವರ ಪುರʼ ಹೆಸರಿನ ಶಾಸನ, ಎರಡು ವೀರಗಲ್ಲುಗಳು ಪತ್ತೆ
ಸೊರಬ ತಾಲೂಕು ಅಧ್ಯಾತ್ಮದ ಧಾರ್ಮಿಕ ಶಕ್ತಿ ಕೇಂದ್ರಕ್ಕೆ ಹೆಸರಾಗಿದ್ದು, ಮಠ- ಮಂದಿರಗಳು ಮಾನವತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು, ಗುರುಗಳ ಹಾಗೂ ದೇವರ ಅನುಗ್ರಹವನ್ನು ನಂಬಿ ನಡೆದಾಗ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಇದನ್ನೂ ಓದಿ: Koppala News: ಆನೆಗೊಂದಿ ಉತ್ಸವ; ಭವ್ಯ ಮೆರವಣಿಗೆಗೆ ಚಾಲನೆ
ಈ ಸಂದರ್ಭದಲ್ಲಿ ಗೊಗ್ಗೆಹಳ್ಳಿ ಮಠದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ಹಿರೇಮಠ ಹಾಗೂ ಕಾನಕೇರಿ ಮಠದ ಘನಬಸವ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಶೀ ಶಿವಮೂರ್ತಿ ಮುರುಘ ರಾಜೇಂದ್ರ ಮಹಾಸ್ವಾಮೀಜಿ, ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗುರು ಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸದಾಶಿವ ಮಹಾಸ್ವಾಮೀಜಿ, ವೀರಶೈವ ಸೊರಬ ಟೌನ್ ಸಮಾಜದ ಅಧ್ಯಕ್ಷ ಎಚ್. ಮಲ್ಲಿಕಾರ್ಜುನಪ್ಪ, ಅಶೋಕ್ ನಾಯಕ್ ಅಂಡಿಗೆ, ಬಸವರಾಜ ಬಾರಂಗಿ, ರಾಜು ಎಂ ತಲ್ಲೂರು, ಈರೇಗೌಡ.ಸಿ.ಪಿ., ಪಂಚಾಕ್ಷರಯ್ಯ ಗೌಡ, ರೇಣುಕಮ್ಮ ಗೌಳಿ, ನಟರಾಜ್, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.