Site icon Vistara News

Shivamogga News: ಸಾದಗಲ್ ಗ್ರಾಮದಲ್ಲಿ ತೋಟಕ್ಕೆ ಹೋಗಿದ್ದ ವೃದ್ಧೆ ನಾಪತ್ತೆ

old woman missing in Sadagal village, Police searching

ಹೊಸನಗರ: ಮನೆಯ ಸಮೀಪದ ತೋಟಕ್ಕೆ ಹೋಗಿದ್ದ ವೃದ್ಧೆಯೋರ್ವರು (Old Woman) ನಾಪತ್ತೆಯಾದ (Missing) ಘಟನೆ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಸಾದಗಲ್ ಗ್ರಾಮದಲ್ಲಿ ನಡೆದಿದೆ.

ಸಾದಗಲ್ ಗ್ರಾಮದ ಚನ್ನಪ್ಪಗೌಡ ಎಂಬುವವರ ಪತ್ನಿ 85 ವರ್ಷದ ಶಾರದಮ್ಮ ನಾಪತ್ತೆಯಾಗಿರುವ ವೃದ್ಧೆ, ಕಳೆದ ಮೂರು ದಿನದ ಹಿಂದೆ ನಾಪತ್ತೆಯಾಗಿರುವ ವೃದ್ಧೆಯ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ. ಮಂಗಳವಾರ ಬೆಳಿಗ್ಗೆ ನಗರ ಠಾಣೆ ಪಿಎಸ್ಐ ರಮೇಶ್ ಪಿ.ಎಸ್. ಅವರ ನೇತೃತ್ವದಲ್ಲಿ ಶ್ವಾನದಳ ಶೋಧ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಮತ್ತೊಂದೆಡೆ ಅರಣ್ಯ ಇಲಾಖೆ ತಂಡ ಕೂಡ ಶೋಧ ಕಾರ್ಯ ನಡೆಸುತ್ತಿದ್ದು, ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಸುರಕ್ಷಿತವಾಗಿ ವೃದ್ಧೆಯ ಪತ್ತೆಗೆ ಪ್ರಾರ್ಥಿಸಿದ್ದಾರೆ.

ನಾಪತ್ತೆಯಾಗಿರುವ ವೃದ್ಧೆ ಶಾರದಮ್ಮ .

ಇದನ್ನೂ ಓದಿ: Bihar Caste Census: ಬಿಹಾರದ ಶೇ.34 ಕುಟುಂಬಗಳ ಆದಾಯ 6000 ರೂ.ಗಿಂತ ಕಡಿಮೆ!

ಶ್ವಾನ ದಳದ ಎಆರ್‌ಎಸ್‌ಐ ಚಂದ್ರಪ್ಪ, ಮುಖ್ಯಪೇದೆ ಪ್ರಸನ್ನ, ಪೊಲೀಸ್ ಸಿಬ್ಬಂದಿಗಳಾದ ವೆಂಕಟೇಶ್, ಪ್ರವೀಣ್, ಮಂಜುನಾಥ್, ಶಾಂತಪ್ಪ, ವಿನಯಕುಮಾರ್, ಮಂಜುನಾಥ್, ಸುಜಯಕುಮಾರ್, ಅರಣ್ಯ ಇಲಾಖೆಯ ಅಧಿಕಾರಿಗಳಾದ ಸತೀಶ್, ಅಮೃತ್ ಸುಂಕದ್, ಪ್ರವೀಣಕುಮಾರ್, ನರೇಂದ್ರಕುಮಾರ್, ಅರಣ್ಯ ರಕ್ಷಕರು ಸೇರಿದಂತೆ ಒಟ್ಟು ಮೂರು ಇಲಾಖೆಯಿಂದ ನಡೆಯುತ್ತಿರುವ ಜಂಟಿ ‌ಕಾರ್ಯಾಚರಣೆಯಲ್ಲಿ 30ಕ್ಕು ಹೆಚ್ಚು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.

Exit mobile version