ಶಿವಮೊಗ್ಗ: ಬ್ಯಾಂಕುಗಳಲ್ಲಿ ಕನ್ನಡಿಗರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಕರ್ನಾಟಕದ ಅಭ್ಯರ್ಥಿಗಳು ಈಗಲಾದರೂ ಜಾಗೃತರಾಗಿ ಸಂಪೂರ್ಣ ಸಿದ್ಧತೆ ನಡೆಸಿಕೊಂಡು ಪರೀಕ್ಷೆ ಎದುರಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ನಾಗರಾಜ್ (Shivamogga News) ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬ್ಯಾಂಕಿಂಗ್ ಪರೀಕ್ಷೆ ತರಬೇತುದಾರ ಆರ್.ಕೆ. ಬಾಲಚಂದ್ರ ಹಾಗೂ ಇಂಗ್ಲೀಷ್ ಉಪನ್ಯಾಸಕ ಶಿವಕುಮಾರ ಮಾವಲಿ ಪಾಲ್ಗೊಂಡಿದ್ದರು. ರಾಜ್ಯದ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.
ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟ ಶಿವಮೊಗ್ಗ ಘಟಕವು ಕರ್ನಾಟಕದ ಉದ್ಯೋಗಗಳು ಕನ್ನಡರಿಗೆ ಸಿಗಲಿ ಎಂಬ ಹೋರಾಟದ ಭಾಗವಾಗಿ ಬ್ಯಾಂಕಿಂಗ್ ಪರೀಕ್ಷೆ ಕುರಿತು ಕರ್ನಾಟಕದ ಅಭ್ಯರ್ಥಿಗಳಿಗೆ ನಗರದಲ್ಲಿ ಏರ್ಪಡಿಸಿದ್ದ ಒಂದು ದಿನದ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ವಿಷಯವನ್ನು ಹೇಗೆ ಓದಬೇಕು ಎನ್ನುವುದನ್ನು ಉದಾಹರಣೆ ಸಹಿತ ನಾಗರಾಜ್ ವಿವರಿಸಿದರು.
ನಂತರ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಮತ ಮಾತನಾಡಿ, ಹೆಣ್ಣುಮಕ್ಕಳು ಈ ಅವಕಾಶವನ್ನು ಹೆಚ್ಚು ಬಳಸಿಕೊಳ್ಳಿ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಾವುದು ಕೂಡ ಕಷ್ಟವಲ್ಲ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂದು ತಿಳಿಸಿದರು.
ಇದನ್ನೂ ಓದಿ: Lakshmi Hebbalkar: ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು 250 ಅಂಗನವಾಡಿ ಆಯ್ಕೆ; ಜು.22ಕ್ಕೆ ಚಾಲನೆ
ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟದ ಅಧ್ಯಕ್ಷ ರಾಜೇಂದ್ರ ಪೈ ಮಾತನಾಡಿ. ಈ ಮಾಹಿತಿ ಕಾರ್ಯಕ್ರಮವೂ ಸೇರಿದಂತೆ ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟ ಈವರೆಗೂ ಒಟ್ಟು 7000 ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನೀಡಿದಂತೆ ಆಗುತ್ತಿದೆ. ಇದು ಕೂಟದ ಇತಿಹಾಸದಲ್ಲಿ ಪ್ರಮುಖ ಹೆಜ್ಜೆ. ಇನ್ನು ಮುಂದೆ ಬಹಳಷ್ಟು ಸಮಾಜಮುಖಿ ಕೆಲಸಗಳು ಕೂಟದಿಂದ ಆಗುವುದಿದೆ. ಇಂತಹ ಕಾರ್ಯಕ್ರಮಗಳು ಆಗಲು ಪ್ರಮುಖ ಕಾರಣ ಕರ್ನಾಟಕದ ಎಲ್ಲೆಡೆ ಇರುವ ಬ್ಯಾಂಕಿಂಗ್ ಕನ್ನಡ ಕೂಟದ ಸದಸ್ಯರು ಎಂದು ತಮ್ಮ ಕೂಟದ ಸದಸ್ಯರ ಸಹಾಯ ಸಹಕಾರವನ್ನು ಸ್ಮರಿಸಿದರು. ವಿಶ್ವನಾಥ್ ವಂದಿಸಿದರು.
ಇದನ್ನೂ ಓದಿ: Karnataka Rain: ಸೊರಬ ತಾಲೂಕಿನ ವಿವಿಧೆಡೆ ಮಳೆ ಆರ್ಭಟ; ವರದಾ ನದಿ ತೀರದ ವ್ಯಾಪ್ತಿಯ ಕೃಷಿ ಭೂಮಿ ಜಲಾವೃತ