ಸೊರಬ: ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರಿಗೆ ಜೀವನ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ತೋರದೆ ಕನಿಷ್ಠ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಅಂಚೆ ನೌಕರರು ಮಂಗಳವಾರ ಪಟ್ಟಣದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ (Protest) ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮೂರ್ತಿ ಹಾಲಗಳಲೆ ಮಾತನಾಡಿ, ಹತ್ತು ಹಲವು ವರ್ಷಗಳಿಂದ ಕನಿಷ್ಠ ಗೌರವಧನ ಪಡೆದು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರ ಹಿತ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕಮಲೇಶ್‍ಚಂದ್ರ ವೇತನ ಆಯೋಗ ನೀಡಿರುವ ವರದಿಯನ್ನು 2016 ರಿಂದ ಅನುಷ್ಠಾನಗೊಳಿಸಬೇಕು. ನಿವೃತ್ತಿ ಹೊಂದಿದ ನೌಕರನಿಗೆ ಕನಿಷ್ಠ ರೂ. 5 ಲಕ್ಷ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: CM Siddaramaiah: ಬಸವೇಶ್ವರ ಏತ ನೀರಾವರಿ ಯೋಜನೆ: 2024ರ ಸೆಪ್ಟೆಂಬರ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದ ಸಿಎಂ
ಇಲಾಖೆಯಲ್ಲಿ 20 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನೌಕರನಿಗೆ ಸಮನಾಗಿ ಹೊಸದಾಗಿ ಸೇರುವ ನೌಕರನಿಗೂ ಒಂದೇ ವೇತನ ನೀಡಲಾಗುತ್ತಿದೆ. ಸುದೀರ್ಘ ಸೇವೆ ಪರಿಗಣಿಸಿ ಹಿರಿಯ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: Lakshmi Hebbalkar: ಇಲಾಖೆಗೆ ಕೆಟ್ಟ ಹೆಸರು ಬರದಂತೆ ಕಾರ್ಯ ನಿರ್ವಹಿಸಿ: ಲಕ್ಷ್ಮೀ ಹೆಬ್ಬಾಳ್ಕರ್
ಗ್ರಾಮೀಣ ಅಂಚೆ ನೌಕರರಾದ ಸಿ.ಎನ್. ಪಾರ್ವತಿ, ಉಮಾಮಹೇಶ್ವರ ಭಟ್ ಹರೀಶಿ, ನಾಗರಾಜ ತಲ್ಲೂರು, ಅಶೋಕ ಜಡೆ, ಪ್ರಿಯಾಂಕ ತಲಗುಂದ, ಹನುಮೇಶ್, ಮರುಗೇಂದ್ರಪ್ಪ ಮಾವಲಿ, ಶಿಲ್ಪಾವತಿ, ಮುದ್ದಪ್ಪ ಜಡೆ, ಅಮಿತ್ ಜಡೆ, ಕೆ.ಪಿ. ಸವಿತಾ ಆನವಟ್ಟಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.