Site icon Vistara News

Shivamogga News: ರಿಪ್ಪನ್‌ಪೇಟೆಯಲ್ಲಿ ಈದ್ ಉಲ್ ಫಿತರ್ ಆಚರಣೆ ಸಂಭ್ರಮ!

#image_title

ರಿಪ್ಪನ್‌ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್‌ನ ಮುಸ್ಲಿಂ ಸಮುದಾಯದವರು ಧರ್ಮಗುರುಗಳಾದ ಮುನೀರ್ ಸಖಾಫಿ ಮತ್ತು ಮುಪ್ತಿ ಇಜ್ ಹಾರ್ ಅಹಮದ್‌ರವರ ನೇತೃತ್ವದಲ್ಲಿ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ (Shivamogga News) ಆಚರಿಸಿದರು.

ಪಟ್ಟಣದ ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಶುಕ್ರವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಇಂದು ಸಡಗರ ಹಾಗೂ ಸಂಭ್ರಮದಿಂದ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ಯಾದಿಯಾಗಿ ಭಕ್ತಿಪೂರ್ವಕವಾಗಿ ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿ ಪರಸ್ಪರ ಶುಭಕೋರಿ ರಂಜಾನ್ ಹಬ್ಬವನ್ನು ಆಚರಣೆ ಮಾಡಿದರು.

ಇದನ್ನೂ ಓದಿ: ಅಮಿತ್‌ ಶಾ ಅವರಿಂದ ರಾಜ್ಯಸಭೆ ಸೀಟು, ಸಚಿವ ಸ್ಥಾನದ ಭರವಸೆ, ಆದರೂ ಮೋಸ ಮಾಡಿದ ಶೆಟ್ಟರ್: ಬಿಎಸ್‌ವೈ ಆರೋಪ

ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಂತರದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಮಾತನಾಡಿ, “ಪೈಗಂಬರ್ ಜೀವನ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಸಾರ್ಥಕವಾಗುವುದು. ಎಲ್ಲ ಧರ್ಮದ ಸಾರವುದು ಒಂದೇ ಆಗಿದೆ. ಭಾರತ ದೇಶ ವಿವಿಧತೆಯಲ್ಲಿ ಏಕತೆಯ ದೇಶವಾಗಿದೆ. ಯಾವುದೇ ಜಾತಿ ಭಾವನೆ ತೋರದೆ ಸರ್ವ ಧರ್ಮದ ಭಾವೈಕ್ಯತೆಯ ದೇಶವಾಗಿದೆ” ಎಂದರು.

“ಭಾರತ ದೇಶದಲ್ಲಿ ಹಲವಾರು ಧರ್ಮ ಜಾತಿ ಪಂಗಡಗಳಿವೆ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ಇದನ್ನು ಸಂವಿಧಾನದ ಅಡಿಯಲ್ಲಿ ಉಪಯೋಗಿಸಿಕೊಂಡು ಪರಸ್ಪರ ಸಾಮರಸ್ಯವನ್ನು, ಸಹಿಷ್ಣುತೆಯನ್ನು ಅಳವಡಿಸಿಕೊಂಡು ಪ್ರೀತಿ ಗೌರವದೊಂದಿಗೆ ಬಾಳಬೇಕಾಗಿದೆ. ಯಾವುದೇ ಧರ್ಮಗಳನ್ನಾಗಲಿ ಪಂಗಡಗಳನ್ನಾಗಲಿ ಜಾತಿಯವರನ್ನಾಗಲಿ ಹೀಯಾಳಿಸುವ ಅಧಿಕಾರ ಇಸ್ಲಾಂ ಧರ್ಮಕ್ಕೆ ಕೊಡಲಿಲ್ಲ. ಯಾವುದೇ ಧರ್ಮದ ಅಥವಾ ಪಂಗಡದ ಒಬ್ಬ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದರೆ ಇಡೀ ಜನ ಸಮೂಹವನ್ನೇ ಕೊಲೆ ಮಾಡಿದ ಶಿಕ್ಷೆಯನ್ನು ಆತನಿಗೆ ಅಲ್ಲಾಹು ನೀಡುತ್ತಾನೆ ಎಂದು ಬೋಧಿಸುವ ಧರ್ಮವಾಗಿದೆ ಇಸ್ಲಾಂ. ಧರ್ಮ ಧರ್ಮಗಳ ನಡುವಿನ ಸಂಘರ್ಷಗಳನ್ನು ಬದಿಗೊತ್ತಿ ಭಾವೆಕ್ಯತೆ, ಸಹೋದರತ್ವ, ಭ್ರಾತೃತ್ವದಿಂದ ಬದುಕೋಣ” ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಇದನ್ನೂ ಓದಿ: Shah Rukh Khan: ಮನೆಯ ಗ್ಯಾಲರಿಗೆ ಬಂದು ಅಭಿಮಾನಿಗಳಿಗೆ ಈದ್‌ ಶುಭಾಶಯ ತಿಳಿಸಿದ ಶಾರುಖ್‌

ಈ ಸಂದರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫಿ, ಕಾರ್ಯದರ್ಶಿಗಳಾದ ಮಹಮ್ಮದ್ ಶಫಿ, ಮೆಕ್ಕಾ ಮಸ್ಜಿದ್ ಅಧ್ಯಕ್ಷರಾದ ಮಹಮ್ಮದ್ ಫಾಜಿಲ್, ಕಾರ್ಯದರ್ಶಿ ನದೀಮ್, ಮುಖಂಡರಾದ ಅರ್.ಎ.ಚಾಬುಸಾಬ್, ಅಮೀರ್ ಹಂಜಾ, ಪತ್ರಕರ್ತ ರಫಿ ರಿಪ್ಪನ್‌ಪೇಟೆ, ಗ್ರಾಪಂ ಸದಸ್ಯ ಆಸೀಫ್‌ ಭಾಷಾಸಾಬ್, ಆರ್.ಎಸ್.ಶಂಶುದ್ದೀನ್, ಭಾಪುಖಾನ್, ಹಸನಬ್ಬ, ನಾಸೀರ್, ರೆಹಮಾನ್ ಚಾಲಿ, ಅಬ್ದುಲ್ ಖುದ್ದುಸ್, ಮಾಜಿ ಗ್ರಾಪಂ ಸದಸ್ಯ ವಾಹಿದ್, ಮೋಹಿದಿ ಇನ್ನಿತರರಿದ್ದರು. 

Exit mobile version