ರಿಪ್ಪನ್‌ಪೇಟೆ: ಧಾರ್ಮಿಕ ಆಚರಣೆಗಳು ಮನುಷ್ಯನಲ್ಲಿ ಶಾಂತಿ ನೆಮ್ಮದಿಯನ್ನು ನೀಡುತ್ತವೆ ಎಂದು ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ (Shivamogga News) ತಿಳಿಸಿದರು.
ಸಮೀಪದ ಕಾರಗೋಡು ಗ್ರಾಮದಲ್ಲಿ ಶುಕ್ರವಾರ ಕಲಾನಾಥೇಶ್ವರ ಮತ್ತು ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೀವನದಲ್ಲಿ ಸಾಧನೆಯ ಗುರಿ ತಲುಪಲು ಗುರುವಿನ ಕಾರುಣ್ಯ ಅಗತ್ಯ. ಮಹಾ ಶಿವರಾತ್ರಿಯ ದಿನದಂದು ಭಗವಂತನ ನಾಮಸ್ಮರಣೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು ಎಂದು ಹೇಳಿದರು.
ಇದನ್ನೂ ಓದಿ: Rohit Sharma : ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ; ಏನದು ದಾಖಲೆ?
ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕಲಾನಾಥೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಯೋಗೇಂದ್ರ ಕಾರಗೋಡು ಆಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Money Guide: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪ್ರಕಟ; ಚೆಕ್ ಮಾಡಿಕೊಳ್ಳಿ
ಈ ಸಂದರ್ಭದಲ್ಲಿ ಕಲಾನಾಥೇಶ್ವರ ದೇವಸ್ಥಾನ ಸೇವಾ ಸಮಿತಿಯ ಗೌರವಾಧ್ಯಕ್ಷ ಹೂವಪ್ಪ ಕಾರಗೋಡು, ದೇವಸ್ಥಾನ ವಾಸ್ತು ಸಲಹೆಗಾರ ಲಿಂಗಸ್ವಾಮಿಗೌಡ ಅಲುವಳ್ಳಿ, ಮಳಲಿಮಠದ ವೇ. ಶಿವರಾಜ ಆರಾಧ್ಯ ಶಾಸ್ತ್ರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಹರೀಶ್ ಸ್ವಾಗತಿಸಿದರು. ಚೇತನ ಕುಮಾರ್ ನಿರೂಪಿಸಿದರು.