Site icon Vistara News

Shivamogga news: ಇನ್ನೂ ತೆರವುಗೊಂಡಿಲ್ಲ 2018ರ ಚುನಾವಣೆಯ ಬ್ಯಾನರ್‌!

#image_title

ರಿಪ್ಪನ್‌ಪೇಟೆ: ಐದು ವರ್ಷಕ್ಕೊಮ್ಮೆ ನಡೆಯುವ ವಿಧಾನಸಭಾ ಚುನಾವಣೆ (Shivamogga news) ಕಳೆದು ಪುನಃ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಇಲ್ಲಿನ ನಾಡ ಕಚೇರಿ ಮತ್ತು ಗ್ರಾಮ ಪಂಚಾಯ್ತಿ ಕಚೇರಿ ಮುಂಭಾಗ ಇನ್ನೂ ಚುನಾವಣಾ ಆಯೋಗದವರು 2018ರ ವಿಧಾನಸಭಾ ಚುನಾವಣೆ ಬ್ಯಾನರ್ ಅನ್ನು ತೆಗೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಈಗಾಗಲೇ 2023ರ ವಿಧಾನಸಭಾ ಚುನಾವಣೆ ಪ್ರಕಟಗೊಂಡು ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆದರೂ ನಾಡಕಚೇರಿ ಮತ್ತು ಗ್ರಾಮ ಪಂಚಾಯ್ತಿ ಬಳಿಯಲ್ಲಿ ಅಳವಡಿಸಲಾಗಿರುವ 2018ನೇ ವರ್ಷದ ಚುನಾವಣಾ ಆಯೋಗದ ವಿಧಾನಸಭಾ ಚುನಾವಣಾ ಫ್ಲೆಕ್ಸ್ ತೆರವುಗೊಳಿಸದೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕರಲ್ಲಿ ಸುದ್ದಿಗೆ ಗ್ರಾಸವಾಗಿದೆ.

ಇದನ್ನೂ ಓದಿ: Karnataka Election 2023: ಚುನಾವಣೆ ತರಬೇತಿಯಲ್ಲಿದ್ದ ನೌಕರ ಹೃದಯಾಘಾತದಿಂದ ಸಾವು; ಮೈಸೂರಲ್ಲಿ ಅಪಘಾತದಲ್ಲಿ ಸವಾರ ಮೃತ್ಯು

ಸಾರ್ವಜನಿಕರು “ಕ್ಷಣ ಕಾಲ ನಾಡಕಚೇರಿಯ ಮತ್ತು ಗ್ರಾಮ ಪಂಚಾಯ್ತಿ ಬಳಿಯಲ್ಲಿನ 2018ರ ವಿಧಾನಸಭಾ ಚುನಾವಣೆ ಬ್ಯಾನರ್ ನೋಡಿ ನಾವುಗಳು 2018ರ ವಿಧಾನಸಭಾ ಚುನಾವಣೆಯಲ್ಲಿ ಇದ್ದೇವೆ ಎನ್ನುವಂತೆ ಭಾಸವಾಗುತ್ತದೆ” ಎಂದು ಹೇಳಿದ್ದಾರೆ. ಅದಲ್ಲದೆ ಬ್ಯಾನರ್‌ನ ಮೇಲ್ಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಪೋಟೊ ಎದ್ದು ಕಾಣುತಿದ್ದು, ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

Exit mobile version