ರಿಪ್ಪನ್‌ಪೇಟೆ: ಚಿನ್ನಕ್ಕಿಂತ (Gold) ಅನ್ನಕ್ಕೆ (Rice) ಬೆಲೆ ಹೆಚ್ಚು ಏಕೆಂದರೆ ಚಿನ್ನವಿಲ್ಲದೆ ದಿನ ಕಳೆಯಬಹುದು ಆದರೆ ಅನ್ನವಿಲ್ಲದೆ ದಿನ ಕಳೆಯಲು ಸಾಧ್ಯವಿಲ್ಲ ಎಂದು ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣ ಸಮೀಪವಿರುವ ಗವಟೂರು ಶ್ರೀ ಹೊಳೆಸಿದ್ಧೇಶ್ವರ ದೇವಸ್ಥಾನ ಸಮಿತಿಯಿಂದ ಆಯೋಜಿಸಿದ್ದ ಶ್ರೀ ಹೊಳೆ ಸಿದ್ಧೇಶ್ವರ ಹಾಗೂ ಶ್ರೀ ಬಸವಣ್ಣ ದೇವರಿಗೆ ರುದ್ರಾಭಿಷೇಕ ಮತ್ತು ಧರ್ಮ ಸಭೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಇದನ್ನೂ ಓದಿ: Training for Youth: ಸ್ವಯಂ ಉದ್ಯೋಗ ನಿರ್ವಹಿಸುತ್ತೀರಾ? ಇಲ್ಲಿದೆ ತರಬೇತಿ; ಈಗಲೇ ಹೆಸರು ನೋಂದಾಯಿಸಿ
ಸಾವಿರ ಜನ ಇದ್ದರೂ ಸಾವನ್ನು ನಿಲ್ಲಿಸಲಾಗದು, ಕೋಟಿ ಸಂಪಾದಿಸಿದರೂ ನೋಟು ತಿನ್ನಲಾಗದು ಆದ್ದರಿಂದ ಬದುಕಿ ಬಾಳಲು ಪ್ರತಿಯೊಬ್ಬರಿಗೂ ಅನ್ನ ಎಷ್ಟು ಮುಖ್ಯವೊ ಅಷ್ಟೇ ಒಳ್ಳೆಯ ಮಾತು ಮುಖ್ಯ. ಒಳ್ಳೆಯತನ ಇದೊಂದೇ ನಾವು ಉಳಿಸಿಟ್ಟು ಹೋಗುವ ಬೆಲೆಕಟ್ಟಲಾಗದ ಆಸ್ತಿ ಎಂದು ತಿಳಿಸಿದರು.
ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಒತ್ತಡದ ನಡುವೆ ನೆಮ್ಮದಿಯ ಬದುಕು ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಜಗತ್ತಿನಲ್ಲಿ ಜ್ಞಾನ ಕೊಡುವ ಶ್ರೀಗುರು, ಅನ್ನ ನೀಡುವ ರೈತ ಪ್ರತಿಯೊಬ್ಬರಿಗೂ ಅವಶ್ಯ, ಗುರು-ಹಿರಿಯರಿಗೆ ತಂದೆತಾಯಿಗಳಿಗೆ ಗೌರವಿಸಿ ನಡೆದುಕೊಂಡು ಬಾಳುವುದೇ ನಿಜವಾದ ಜೀವನವೆಂದು ತಿಳಿಸಿದರು.
ಇದನ್ನೂ ಓದಿ: Tulsi Plant Care: ಚಳಿಗಾಲದಲ್ಲಿ ತುಳಸಿ ಗಿಡವನ್ನು ಬೆಳೆಸುವುದು ಸವಾಲೇ? ಇಲ್ಲಿವೆ ಟಿಪ್ಸ್!
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ದುಂಡ ರಾಜಪ್ಪ ಗೌಡ, ಕೃಷ್ಣಯ್ಯ ಶೆಟ್ಟಿ, ರಾಘವೇಂದ್ರ, ಉಲ್ಲಾಸ್, ಯೋಗೇಂದ್ರ, ವಸಂತ, ಶಂಕರ್, ಮಲ್ಲಿಕಾರ್ಜುನ, ಪಾರ್ವತಿ, ಸುಮಾ, ಬಿಎಸ್ಎನ್ಎಲ್ ಶ್ರೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.