Site icon Vistara News

Shivamogga News: ಅ.15ರಿಂದ ಹೊಂಬುಜ ಮಠದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ

Hombuja atishaya mahakshethra

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಅ.15 ರಿಂದ 24ರವರೆಗೆ ಶ್ರೀ ಜಗನ್ಮಾತೆ ಪದ್ಮಾವತಿ ಅಮ್ಮನವರ ಮತ್ತು ಭಗವಾನ್ ಪಾರ್ಶ್ವನಾಥಸ್ವಾಮಿ ಮಹಾಸನ್ನಿಧಾನದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ (Dasara) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಅಕ್ಟೋಬರ್ 15 ರಂದು ಭಾನುವಾರ ಶರನ್ನವರಾತ್ರಿ ಉತ್ಸವವು ಹೊಂಬುಜ ಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ದೇವಿಯ ಸನ್ನಿಧಿಯಲ್ಲಿ ಘಟಸ್ಥಾಪನೆ ಮಹಾನೈವೇದ್ಯ ಪೂಜೆ ಜರುಗಲಿದೆ.

ಅ.20 ರಂದು ಸರಸ್ವತಿ ಪೂಜೆ, 22 ರಂದು ಜೀವದಯಾಷ್ಟಮಿ, ಅ.23 ಎಂದು ಆಯುಧಪೂಜೆ ಮತ್ತು ಮಹಾನವಮಿ, ಅ. 24 ರಂದು ವಿಜಯ ದಶಮಿ ಉತ್ಸವ ಮಹಾದೇವಿ ಪಲ್ಲಕ್ಕಿ ಉತ್ಸವ, ಹೊಂಬುಜ ಜೈನಮಠಾಧೀಶರಾದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪರಂಪರಾಗತ ಸಿಂಹಾಸನಾರೋಹಣ ನಡೆಯಲಿದೆ.

ಇದನ್ನೂ ಓದಿ: Mysore dasara : ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ; ನಾಳೆ ಹಂಸಲೇಖರಿಂದ ಸಿಗಲಿದೆ ಚಾಲನೆ

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವಿಯ ದರ್ಶನಾಶೀರ್ವಾದ ಪಡೆಯುವಂತೆ ಮಠದ ಆಡಳಿತಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version