Site icon Vistara News

Shivamogga News: ಶಿವಶರಣೆ ಅಕ್ಕಮಹಾದೇವಿ ವಿಚಾರಧಾರೆ, ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ: ಶ್ರೀ ಸಿದ್ದ ವೃಷಭೇಂದ್ರ ಸ್ವಾಮೀಜಿ

Shivasharane Akkamahadevi Jayanti Celebration and Shivanubhava programme at Soraba

ಸೊರಬ: ಶಿವಶರಣೆ ಅಕ್ಕಮಹಾದೇವಿ ಅವರ ವಿಚಾರಧಾರೆ, ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಅಕ್ಕನ ವಚನಗಳಲ್ಲಿ ಬದುಕಿನ ಮೌಲ್ಯತೆ ಅಡಗಿವೆ ಎಂದು ಜಡೆ ಸಂಸ್ಥಾನ ಮಠ ಮತ್ತು ಸೊರಬ ಮುರುಘಾಮಠದ ಕುಮಾರ ಕಂಪಿನ ಶ್ರೀ ಸಿದ್ದ ವೃಷಭೇಂದ್ರ ಸ್ವಾಮೀಜಿ (Shivamogga News) ಹೇಳಿದರು.

ಪಟ್ಟಣದ ಮುರುಘಾಮಠದ ಆವರಣದಲ್ಲಿ ಮಂಗಳವಾರ ದವನದ ಹುಣ್ಣಿಮೆ ಪ್ರಯುಕ್ತ 220ನೇ ಶಿವಾನುಭವ ಮತ್ತು ಶಿವಶರಣೆ ಅಕ್ಕಮಹಾದೇವಿ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಇದನ್ನೂ ಓದಿ: Zero Shadow Day: ನಾಳೆ ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

ಅಕ್ಕಮಹಾದೇವಿ ಅವರ ಜೀವನ ಮತ್ತು ಸಾಧನೆ ನಮಗೆಲ್ಲ ಮಾದರಿ. ಅಕ್ಕ ಮಹಾತಪಸ್ವಿ, ಅಧ್ಯಾತ್ಮದ ಅರಿವು ಮೂಡಿಸುವ ಜ್ಯೋತಿ ಆಗಿದ್ದರು. ವಚನ ಚಳವಳಿ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದರು ಎಂದು ತಿಳಿಸಿದರು.

ರೇಣುಕಮ್ಮ ಗೌಳಿ ಅಕ್ಕಮಹಾದೇವಿ ಅವರ ಜೀವನ ಚರಿತ್ರೆಯ ಕುರಿತು ಉಪನ್ಯಾಸ ನೀಡಿ, ಮಾತನಾಡಿದರು. ಜಯಮಾಲ ಅಣ್ಣಾಜಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Road Accident: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು; ಅಪಘಾತದ ಬಳಿಕ ಹೊತ್ತಿ ಉರಿದ ಬಸ್

ಈ ಸಂದರ್ಭದಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ಶಿವಯೋಗಿ, ರೇವತಿ, ರೇಖಾ, ವೀಣಾ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version