ಸೊರಬ: ಗ್ರಾಮೀಣ ಭಾಗಗಳಲ್ಲಿ ನಡೆಯುವ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು (Dramas) ಮನರಂಜನೆ ನೀಡುವುದರ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಅತ್ಯಂತ ಸಹಕಾರಿಯಾಗಿವೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಡಾ.ಆರ್. ಶ್ರೀಧರ್ ಹುಲ್ತಿಕೊಪ್ಪ (Shivamogga News) ತಿಳಿಸಿದರು.
ತಾಲೂಕಿನ ಚಂದ್ರಗುತ್ತಿ ಸಮೀಪದ ಪುರದೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಕಲಾ ನಾಟ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ ಅರ್ಥಾತ್ ಒಡಹುಟ್ಟಿದವರು ಎಂಬ ಸಾಮಾಜಿಕ ನಾಟಕದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Job Alert: ಎಸ್‌ವಿಸಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಏ. 9ರೊಳಗೆ ಅರ್ಜಿ ಸಲ್ಲಿಸಿ
ಗ್ರಾಮೀಣ ಪ್ರದೇಶದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು ಇಂದಿಗೂ ಭಕ್ತಿ ಮತ್ತು ಭಾವನೆಯ ಸಂಕೇತವಾಗಿವೆ, ಸಮಾಜದ ಬದಲಾವಣೆ, ಪರಿವರ್ತನೆ ಮಾಡಲು ಇಂತಹ ನಾಟಕಗಳು ಸಹಕಾರಿಯಾಗಿದೆ, ಗ್ರಾಮಾಂತರ ಭಾಗಗಳಲ್ಲಿ ನಡೆಯುವ ನಾಟಕಗಳು ಪಟ್ಟಣ ಪ್ರದೇಶಗಳಲ್ಲಿಯೂ ಸಹ ನಡೆಯಬೇಕು. ನಾಟಕಗಳನ್ನು ಆಯೋಜಿಸುವುದರಿಂದ ಸ್ಥಳೀಯ ಕಲಾವಿದರಿಗೆ ತಮ್ಮ ಕಲೆಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಶ್ರೀಧರ್ ಹುಲ್ತಿಕೊಪ್ಪ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಶ್ರೀ ಬಸವೇಶ್ವರ ಕಲಾ ನಾಟ್ಯ ಸಂಘದ ಕಲಾವಿದರಿಂದ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ ಅರ್ಥಾತ್ ಒಡಹುಟ್ಟಿದವರು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲೇ ಇಂಡಿಗೋ, ಏರ್ ಇಂಡಿಯಾ ವಿಮಾನ ಡಿಕ್ಕಿ; ಪ್ರಯಾಣಿಕರಿಗೆ ಶಾಕ್!
ಈ ವೇಳೆ ಪುರದೂರು ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಪ್ರಮುಖರಾದ ಮಾರ್ಯಪ್ಪ ಬೆನ್ನೂರು, ಈಶ್ವರಪ್ಪ ಚನ್ನಪಟ್ಟಣ, ವೀರಪ್ಪಯ್ಯ, ಪುಟ್ಟರಾಜ್ ಗೌಡ್ರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.