Site icon Vistara News

Shivamogga News: ಸೊರಬದಲ್ಲಿ ಅದ್ಧೂರಿಯಾಗಿ ಜರುಗಿದ ರಂಜಾನ್‌ ಹಬ್ಬ

#image_title

ಸೊರಬ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಸಮಾಜದವರು ಶನಿವಾರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ (Shivamogga News) ಆಚರಿಸಿದರು.

ಪವಿತ್ರ ರಂಜಾನ್ ಮಾಸದಲ್ಲಿ ಒಂದು ತಿಂಗಳು ಉಪವಾಸ ವ್ರತ ಆಚರಿಸಿದ ಮುಸ್ಲಿಮರು, ಉಪವಾಸದ ವ್ರತವನ್ನು ಅಂತ್ಯಗೊಳಿಸಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಪಟ್ಟಣದ ಮಾರ್ಕೆಟ್ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಧರ್ಮ ಸಂದೇಶವನ್ನು ಬೋಧಿಸಿದರು.

ಇದನ್ನೂ ಓದಿ: Karnataka Election : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಸೊರಬದ ಎಸ್‍ಪಿ ಅಭ್ಯರ್ಥಿ ಪರಶುರಾಮ್ ವಿರುದ್ಧ ಪ್ರಕರಣ ದಾಖಲು

ಪಟ್ಟಣದ ಕಾನುಕೇರಿ ಬಡಾವಣೆಯ ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪಟ್ಟಣದ ಹೊಸಪೇಟೆ ಬಡಾವಣೆ, ಹಳೇ ಪೋಸ್ಟ್ ಆಫೀಸ್ ರಸ್ತೆಯ ಮಸೀದಿಗಳಲ್ಲೂ ವಿಶೇಷ ಪಾರ್ಥನೆ ಸಲ್ಲಿಸಲಾಯಿತು. ತಾಲೂಕಿನ ಚಂದ್ರಗುತ್ತಿ, ಅಂಕರವಳ್ಳಿ, ಕುಪ್ಪಗಡ್ಡೆ, ಜಡೆ, ಆನವಟ್ಟಿ, ಉಳವಿ ಸೇರಿದಂತೆ ವಿವಿಧಡೆ ಮುಸ್ಲಿಮರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿವಿಧ ಗಣ್ಯರು ಹಬ್ಬದ ಅಂಗವಾಗಿ ಶುಭ ಹಾರೈಸಿದರು.

Exit mobile version