ಶಿವಮೊಗ್ಗ: ಶ್ರೀ ಕೃಷ್ಣ (Sri Krishna) ನಮ್ಮೆಲ್ಲರ ಆರಾಧ್ಯ ದೈವ. ಇಡೀ ಜಗತ್ತಿಗೆ (World) ಬೆಳಕನ್ನು ನೀಡಿ, ಧರ್ಮ ನಿಷ್ಠೆಯಿಂದ ಬದುಕಬೇಕೆಂದು ಹೇಳಿಕೊಟ್ಟವನು ಶ್ರೀ ಕೃಷ್ಣ ಎಂದು ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ) ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Asia Cup 2023: ಭಾರತ-ಪಾಕ್ ನಡುವಣ ಸೂಪರ್-4 ಪಂದ್ಯಕ್ಕೆ ಮಳೆ ಬಂದರೆ ಮೀಸಲು ದಿನ ಇದೆಯೇ?
ಗೋ ಸಂರಕ್ಷಣೆಗೆ ಸಂಪೂರ್ಣವಾಗಿ ಶಕ್ತಿ ಕೊಟ್ಟವನು ಶ್ರೀಕೃಷ್ಣ. ಶ್ರೀಕೃಷ್ಣ ಈ ಸಮಾಜಕ್ಕೆ ಮಾತ್ರ ದೇವರಲ್ಲ, ಇಡೀ ಪ್ರಪಂಚಕ್ಕೆ ದೇವರು. ಒಳ್ಳೆ ಸಂಗತಿಗಳನ್ನು ಯೋಚನೆ ಮಾಡುತ್ತಾ ಮೈಗೂಡಿಸಿಕೊಳ್ಳಬೇಕು. ನಿಸ್ವಾರ್ಥತೆಯಿಂದ ಕೆಲಸವನ್ನು ಮಾಡು ಅದರ ಫಲ ನನಗೆ ಬಿಡು, ಅದಕ್ಕೆ ದಕ್ಕಬೇಕಾದ ಫಲ ದಕ್ಕುತ್ತದೆ ಎಂಬ ಕೃಷ್ಣನ ಮಾತಿನಂತೆ ಧರ್ಮ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಕೆ ಪ್ರೇಮ ಮಾತನಾಡಿದರು.
ಇದನ್ನೂ ಓದಿ: Chandrayaan 3: ಚಂದ್ರನ ಅಂಗಳದಲ್ಲಿ ವಿಕ್ರಮನ ಬೆನ್ನತ್ತಿದ ನಾಸಾ; ಲ್ಯಾಂಡಿಂಗ್ ಫೋಟೊಗಳೂ ರಿಲೀಸ್
ಕಾರ್ಯಕ್ರಮದಲ್ಲಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಕೆ.ಅಂಜನಪ್ಪ, ತಾಲೂಕು ಗೊಲ್ಲರ ಸಂಘದ ಅಧ್ಯಕ್ಷ ಎಸ್.ಎಚ್.ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್., ಧರ್ಮ ಪ್ರಸಾದ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.