ರಿಪ್ಪನ್‌ಪೇಟೆ: ಜಗತ್ತಿನ ಸರ್ವ ಜೀವಿಗಳ ಸಂರಕ್ಷಣೆ, ಪೋಷಣೆಗಾಗಿ 24ನೇ ತೀರ್ಥಂಕರ ಶ್ರೀ ವರ್ಧಮಾನ ಮಹಾವೀರ ಸ್ವಾಮಿ (Sri Vardhamana Mahaveera Swami) ಅವರು 2550 ವರ್ಷಗಳ ಹಿಂದೆ ವಿಶ್ವ ಭ್ರಾತೃತ್ವ, ಅಹಿಂಸಾವಾದ ಪ್ರಚುರಪಡಿಸಿದ ಶ್ರೀ ಮಹಾವೀರ ವಾಣಿಯನ್ನು ಇಂದು ಪ್ರತಿಯೊಬ್ಬರು ಆಚರಿಸುವಂತಾಗಬೇಕು ಎಂದು ಹೊಂಬುಜ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ದಕ್ಷಿಣ ಭಾರತದ ಜೈನರ ಕಾಶಿ ಎಂದು ಖ್ಯಾತಿ ಪಡೆದಿರುವ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 24ನೇ ತೀರ್ಥಂಕರ ಶ್ರೀ ವರ್ಧಮಾನ ಮಹಾವೀರ ಸ್ವಾಮಿಯ 2550ನೇ ನಿರ್ವಾಣೋತ್ಸವದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪ್ರತಿಯೊಂದು ಮನೆಯಲ್ಲಿ ವಾತ್ಸಲ್ಯಮಯ ಸಾಮಾರಸ್ಯವು ಇದ್ದರೆ ರಾಜ್ಯ-ದೇಶ-ವಿಶ್ವದೆಲ್ಲೆಡೆ ಆರೋಗ್ಯದಾಯಕ ಶಾಂತಿಯ ಪರಿಸರ ನಿರ್ಮಾಣವಾಗುವುದು ನಿಶ್ಚಿತ ಎಂದು ಹೇಳಿದರು.
ಇದನ್ನೂ ಓದಿ: Karnataka Drought : ರೈತರೇ, ಬರ ಪರಿಹಾರ ಬೇಕಿದ್ದರೆ ಹೀಗೆ ಮಾಡಿ; 2 ವಾರ ಮಾತ್ರ ಕಾಲಾವಕಾಶ!
ಹೊಂಬುಜ ಜೈನ ಮಠದಲ್ಲಿನ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.
ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬೇಗ ಹಾಕಿಸಿ, ದಂಡ ತಪ್ಪಿಸಿ! 4 ದಿನ ಮಾತ್ರ ಬಾಕಿ
ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡಿದ್ದರು.