ಸೊರಬ: ತಾಲೂಕಿನ ಜಡೆ ಹೋಬಳಿಯ ಆಲಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ (Sri Veerabhadreswara Swami Jayantyotsava) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ, ಮಾತನಾಡಿ, ಶಿವನ ಮಾನಸಪುತ್ರನೆಂದು ಕರೆಯಲ್ಪಡುವ ಶ್ರೀ ವೀರಭದ್ರ ಸ್ವಾಮಿಗೆ ದೇಶಾದ್ಯಂತ ಕೋಟ್ಯಂತರ ಭಕ್ತರಿದ್ದು, ಮನೆ ದೇವರಾಗಿ ಆರಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಭಕ್ತರ ಇಷ್ಟಾರ್ಥವನ್ನು ಸಿದ್ಧಿಸುವ ಶಕ್ತಿಯನ್ನು ಶ್ರೀ ವೀರಭದ್ರ ಸ್ವಾಮಿ ಹೊಂದಿದ್ದಾರೆ. ವೀರಭದ್ರನ ವೀರಗುಣಗಳನ್ನು ಪ್ರತಿಬಿಂಬಿಸುವ ಆರಾಧನೆಯು ಕಟ್ಟು ನಿಟ್ಟಿನ ಆಚರಣೆಗಳು ಬಹು ಪ್ರಾಚೀನವಾದವು. ವೀರಭದ್ರ ಸ್ವಾಮಿಯನ್ನು ವೀರಶೈವ ಸಮಾಜದವರು ಮಾತ್ರವಲ್ಲದೇ ಎಲ್ಲಾ ಸಮಾಜದವರು ಆರಾಧನೆ ಮತ್ತು ಮನೆ ದೇವರಾಗಿ ಪೂಜಿಸುತ್ತಿದ್ದಾರೆ. ಇಂದಿಗೂ ಸಹ ವೀರಭದ್ರ ಸ್ವಾಮಿಯಲ್ಲಿ ಗಾಢಭಕ್ತಿ ಮತ್ತು ಅಚಲ ವಿಶ್ವಾಸ ನಡೆದುಕೊಂಡು ಬಂದಿದೆ ಎಂದರು.
ಇದನ್ನೂ ಓದಿ: Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾರ್ಯಕ್ರಮದಲ್ಲಿ ಜಡೆ ಹಿರೇಮಠ ಹಾಗೂ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಮಾತನಾಡಿದರು.
ಇದಕ್ಕೂ ಮೊದಲು ಶ್ರೀ ದೇವರ ಸನ್ನಿಧಿಯಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರ ಹೋಮ, ಪಾರ್ಣಹುತಿ, ಮಹಾಮಂಗಳಾರತಿ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಗ್ರಾಮದಲ್ಲಿ ಶ್ರೀ ವೀರಭದ್ರ ದೇವರ ಭಾವಚಿತ್ರದ ಮೆರವಣಿಯನ್ನು ವಿವಿಧ ವಾದ್ಯಘೋಷಗಳೊಂದಿಗೆ ವಿಜೃಂಭಣೆಯಿಂದ ಮಾಡಲಾಯಿತು. ತಲಗಡ್ಡೆ ಶಿವಕುಮಾರ ಶಾಸ್ತ್ರಿ ಹಾಗೂ ಸಂಗಡಿಗರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಜಡೆ ಹಿರೇಮಠದ ಶ್ರೀ ರುದ್ರ ದೇವರು, ಪ್ರಮುಖರಾದ ಉದ್ಯಮಿ ವೆಂಕಟೇಶ ಕಾಮತ್, ಡಾ. ವಿಶ್ವನಾಥ ನಾಡಿಗೇರ್, ಸದಾನಂದ ಗೌಡ ಬಿಳಗಲಿ, ಬಂಗಾರಪ್ಪ ಗೌಡ ಕುಪ್ಪೆ, ವಿಜಯ ಗೌಡ, ವೀರಪ್ಪ ಗೌಡ ಪಾಟೀಲ್ ಆಲಹಳ್ಳಿ, ಮಂಜಣ್ಣ ಅರ್ಕಸಾಲಿ, ವೀರೇಂದ್ರ ಪಾಟೀಲ್ ಸೇರಿದಂತೆ ಇತರರಿದ್ದರು.