ಸೊರಬ: ಮನುಷ್ಯನ ಸುಗಮ ಜೀವನಕ್ಕೆ ಪ್ರಾಕೃತಿಕ ಸಂಪತ್ತನ್ನು (Nature Wealth) ಹೆಚ್ಚಿಸಿ ಸುಸ್ಥಿರ ಅರಣ್ಯ ಸಂಪನ್ಮೂಲವನ್ನು ಅಭಿವೃದ್ಧಿ (Development) ಪಡಿಸುವ ಅಗತ್ಯವಿದೆ ಎಂದು ವಲಯ ಅರಣ್ಯಾಧಿಕಾರಿ ಪರಶುರಾಮ್ ತಿಳಿಸಿದರು.
ಆನವಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಮತ್ತು ಕಾಲೇಜಿನ ಸಹಯೋಗದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಇಪ್ಪತ್ತೊಂದನೆಯ ಶತಮಾನದಲ್ಲಿ ಜಾಗತಿಕ ತಾಪಮಾನದ ಸಮಸ್ಯೆ ತೀವ್ರವಾಗಿದ್ದು, ಮನುಷ್ಯನನ್ನು ಒಳಗೊಂಡು ಜೀವಸಂಕುಲದ ಉಳಿವಿಗೆ ಏಕೈಕ ಆಸರೆಯಾಗಿರುವ ಭೂಮಿ ಇಂದು ಬರಡಾಗುತ್ತಿದೆ ಅದನ್ನು ಉಳಿಸಬೇಕು ಎಂದರು.
ಇದನ್ನೂ ಓದಿ: Ballari News: ಏಷ್ಯನ್ ಗೇಮ್ಸ್‌ನಲ್ಲಿ ನಂದಿನಿಗೆ ಕಂಚು, ಸಿರುಗುಪ್ಪದ ಧೋಬಿ ಕುಟುಂಬದಲ್ಲಿ ಬೆಳಗಿದ ಪ್ರತಿಭೆ
ಜೀವ ಸಂಕುಲದ ಬದುಕಿಗೆ ಏಕೈಕ ಆಸರೆಯಾದ ಭೂಮಿಯು ಇನ್ನು ಕೆಲವೇ ವರ್ಷಗಳಲ್ಲೇ ಜೀವಸಂಕುಲ ನಮ್ಮ ಇಂದಿನ ಜೀವನ ಶೈಲಿಯಿಂದ ಹಾಳಾಗುವ ಅಪಾಯವಿದೆ. ಇದಕ್ಕೆಲ್ಲಾ ಪರಿಹಾರವೆಂದರೆ ಅರಣ್ಯ ಅತಿಕ್ರಮಣ, ವನ್ಯಜೀವಿಗಳ ಹತ್ಯೆ ಇಂತಹ ಕೃತ್ಯಗಳನ್ನು ನಿಲ್ಲಿಸಬೇಕು. ಸಾವಯವ ಕೃಷಿ, ನೈಸರ್ಗಿಕ ಕೃಷಿಗೆ ಮರಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ನೇಮಿನಾಥ್ ವನ್ಯಜೀವಿ ಸಪ್ತಾಹದ ಕುರಿತು ಪರಿಚಯಿಸಿದರು.
ಇದನ್ನೂ ಓದಿ: Shivamogga News: ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಗೆ ಶಿವಮೊಗ್ಗದ ಡಾ. ಆರ್. ಎಸ್. ವರುಣ್‌ಕುಮಾರ್ ಸೇರ್ಪಡೆ
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಿ. ಗಣಪತಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪಿ. ಸತೀಶ್, ಕಾಲೇಜಿನ ಐಕ್ಯುಎಸಿ ಸಂಯೋಜಕ ರಾಘವೇಂದ್ರ ನಾಯ್ಕ ಮತ್ತು ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.