Site icon Vistara News

Shivamogga News: ನಾಟಕಗಳು ಸಮಾಜದಲ್ಲಿನ ತಾರತಮ್ಯ, ಲೋಪ ತಿದ್ದುವ ಕೆಲಸ ಮಾಡುತ್ತವೆ: ಗಣಪತಿ ಹುಲ್ತಿಕೊಪ್ಪ

Tavaru Mane social comedy drama performance in Nadahalli village

ಸೊರಬ: ಸಮಾಜದಲ್ಲಿನ ತಾರತಮ್ಯ, ಲೋಪಗಳನ್ನು ತಿದ್ದುವ ಕೆಲಸ ನಾಟಕಗಳಿಂದಾಗುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ (Shivamogga News) ಹೇಳಿದರು.

ಪಟ್ಟಣ ವ್ಯಾಪ್ತಿಯ ನಡಹಳ್ಳಿ ಗ್ರಾಮದಲ್ಲಿ ಮಾರಿಕಾಂಬ ದೇವಿಯ ವಾರ್ಷಿಕೋತ್ಸವ ಅಂಗವಾಗಿ ಶ್ರೀ ರೇಣುಕಾಂಬ ಕಲಾ ನಾಟ್ಯ ಸಂಘ ನಡಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ’ತವರು ಮನೆ’ ಸಾಮಾಜಿಕ ಹಾಸ್ಯನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ನಡಹಳ್ಳಿ ಗ್ರಾಮ ಕಲೆ, ಸಾಹಿತ್ಯ, ಧಾರ್ಮಿಕತೆಗೆ ಹೆಸರಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಮಾತನಾಡಿದರು.

ಇದನ್ನೂ ಓದಿ: Eyes Care While Studying: ಪರೀಕ್ಷೆಯ ದಿನಗಳಲ್ಲಿ ಕಣ್ಣಿನ ಕಾಳಜಿ ಹೀಗಿರಲಿ…

ನಡಹಳ್ಳಿ ಶ್ರೀ ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಕೆ.ಶ್ರೀಧರಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೊರಬ ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾಧಿಕಾರಿ ಸುಬ್ರಾಯ ನಾಯ್ಕ್, ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಕನ್ನಡ ಉಪನ್ಯಾಸಕ ಎಸ್.ಎಂ.ನೀಲೇಶ, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ವೇಣುಗೋಪಾಲ್, ಪುರಸಭೆ ಸದಸ್ಯ ಮಧುರಾಯ್ ಜಿ.ಶೇಟ್, ಲಿಂಗಪ್ಪ ಗುಂಡಶೆಟ್ಟಿಕೊಪ್ಪ, ನಡಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಹೆಡ್ಡೆ ರಾಮಪ್ಪ, ಸದಾಶಿವ, ದೂಪಪ್ಪ ಹಾಗೂ ಸಂಘದ ಅಧ್ಯಕ್ಷ ದೊಡ್ಮನೆ ಲಕ್ಷ್ಮಣಪ್ಪ, ಸಂಚಾಲಕ ಪ್ರಮೋದ್, ಶಿಕ್ಷಕ ಪರಮೇಶ್ವರಪ್ಪ, ನಾಗೇಶ್ ನಡಹಳ್ಳಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ: Karnataka Weather: ಬಿಸಿಲ ಧಗೆಯೊಳಗೆ ಕಾವೇರಿದ ಕರ್ನಾಟಕ; ಇನ್ನೆರಡು ದಿನ ಬಿಸಿಲು ಹೆಚ್ಚಳ

ಉಪನ್ಯಾಸಕ ಮಹಾಬಲೇಶ್ವರ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಬಸವರಾಜ್ ನಿರ್ವಹಿಸಿದರು. ಕಾರ್ಯದರ್ಶಿ ಎನ್.ಆರ್.ರಘುಪತಿ ವಂದಿಸಿದರು.

Exit mobile version