Site icon Vistara News

Shivamogga News: ಸಾಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ; ಆರೋಪಿ ಬಂಧನ

Two wheeler theft Arrest of the accused at Sagara

ಸಾಗರ: ದ್ವಿಚಕ್ರ ವಾಹನವನ್ನು ಕಳವು (Bike Theft) ಮಾಡಿದ್ದ ಆರೋಪಿಯನ್ನು (Accused) ಸಾಗರದ ಟೌನ್ ಪೊಲೀಸರು ಬಂಧಿಸಿ, ಆತನಿಂದ ಸುಮಾರು 70 ಸಾವಿರ ರೂ. ಮೌಲ್ಯದ ಬೈಕ್‌ ಅನ್ನು ವಶಪಡಿಸಿಕೊಂಡಿರುವ ಘಟನೆ ಜರುಗಿದೆ.

ಸಾಗರ ತಾಲೂಕಿನ ನೆಹರು ಮೈದಾನದಲ್ಲಿರುವ ಉರ್ದು ಶಾಲೆ ಬಳಿ ಸೆ.26 ರಂದು ದ್ವಿಚಕ್ರ ವಾಹನವೊಂದು ಕಳ್ಳತನವಾಗಿರುವ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: CDAC Recruitment 2023: 278 ಹುದ್ದೆಗಳಿವೆ; ಇಂದೇ ಅರ್ಜಿ ಸಲ್ಲಿಸಿ

ಈ ಬೈಕ್‌ ಪತ್ತೆಯ ಸಲುವಾಗಿ ಎಸ್‌ಪಿ ಮಿಥುನ್‌ ಕುಮಾರ್ ಮತ್ತು ಎಎಸ್‌ಪಿ ಅನಿಲ್ ಕುಮಾರ್ ಭೂಮ್‌ರೆಡ್ಡಿ ಆದೇಶದ ಮೇರೆಗೆ ಡಿವೈಎಸ್ಪಿ ಗೋಪಾಲ ಕೃಷ್ಣ ಟಿ. ನಾಯ್ಕ ಹಾಗೂ ಪೇಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸೀತಾರಾಂ ಅವರ ಮಾರ್ಗದರ್ಶನದಲ್ಲಿ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ಹಾಗೂ ಟಿ ಡಿ ಸಾಗರ್‌ಕರ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.

ತನಿಖಾ ತಂಡದಲ್ಲಿ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ರತ್ನಾಕರ್, ವಿಕಾಸ್, ವಿಶ್ವನಾಥ್, ಕೃಷ್ಣಮೂರ್ತಿ ಮತ್ತು ಮಹಿಳಾ ಪೇದೆ ಶಿಲ್ಪಾ ಅವರನ್ನು ಒಳಗೊಂಡ ತಂಡ ಬುಧವಾರ ಆರೋಪಿ ರಾಮನಗರದ ಗಾರೆ ಕೆಲಸ ಮಾಡುವ ಮಹಮ್ಮದ್ ಇಮ್ರಾನ್ (28) ಎಂಬ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಸುಮಾರು 70,000 ರೂ. ಮೌಲ್ಯದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

Exit mobile version