ರಿಪ್ಪನ್‌ಪೇಟೆ: ಪಟ್ಟಣದ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗೌಡಕೊಪ್ಪ ಗ್ರಾಮದಲ್ಲಿ ಬಾಳೆಗೊನೆ ಕಡಿಯುವ ವಿಚಾರದಲ್ಲಿ ಗಲಾಟೆ (Uproar) ನಡೆದಿದ್ದು, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ (Ripponpet Police Station) ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಗೌಡಕೊಪ್ಪ ಗ್ರಾಮದ ಅರುಣ್ ಕುಮಾರ್ ಎಂಬುವವರಿಗೆ ಸೇರಿದ ಬಾಳೆ ತೋಟದ ಬಾಳೆಗೊನೆಯನ್ನು ತೂಕದ ಲೆಕ್ಕದಲ್ಲಿ ಕಟಾವು ಮಾಡಲು ಸಾಗರ ಮೂಲದ ಇಮ್ರಾನ್ ಎಂಬುವವರೊಂದಿಗೆ ಮಾತುಕತೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರ ಬಾಳೆ ಗೊನೆ ಕಡಿಯಲು ಬಂದ ಸಾಗರ ಮೂಲದ ಸೈಯದ್ ಫೈಜುದ್ದೀನ್, ಸಲ್ಮಾನ್ ಹಾಗೂ ಜಮೀನು ಮಾಲೀಕ ಅರುಣ್ ಕುಮಾರ್ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: Drought in Karnataka : ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಬೆಳೆ ಹಾನಿ; 6 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮೊರೆ
ಈ ಘಟನೆಯಲ್ಲಿ ಅರುಣ್ ಕುಮಾರ್ ಹಾಗೂ ಸೈಯದ್ ಫೈಜುದ್ದೀನ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.