ರಿಪ್ಪನ್‌ಪೇಟೆ: ಯುವ ಸಮೂಹ ಸಮಾಜಕ್ಕೆ (Society) ಮಾದರಿಯಾಗಬೇಕು ಎಂದು ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2023-24 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಎನ್.ಎಸ್.ಎಸ್., ಯುವ ರೆಡ್ ಕ್ರಾಸ್, ರೋವರ್ಸ್-ರೇಂಜರ್ಸ್ ಚಟುವಟಿಕೆಗಳ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕೇವಲ ಅಂಕಗಳಿಸಲು ಮಾತ್ರ ಶಿಕ್ಷಣ ಸೀಮಿತವಾಗಬಾರದು, ಬದುಕಿನಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಶಾಶ್ವತವಾಗಿ ಹೆಸರು ಉಳಿಯುವಂತೆ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: Stock Market: ಸೆನ್ಸೆಕ್ಸ್ 1628 ಅಂಕ ಕುಸಿತ! ನಿಫ್ಟಿಯದ್ದೂ ಅದೇ ಕತೆ; 4 ಲಕ್ಷ ಕೋಟಿ ರೂ. ನಷ್ಟ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಲಸ್ವಾಮಿಗೌಡ ಬೆಳಕೋಡು, ಸಿಡಿಸಿ ಸಮಿತಿಯ ಆರ್.ಎಚ್. ಶ್ರೀನಿವಾಸ್ ಅಚಾರ್, ಮಂಜುನಾಥ ಮಳವಳ್ಳಿ, ರಮೇಶ್, ಮಂಜುನಾಥ ಕಾಮತ್, ವಿಜೇಂದ್ರ, ಪುಟ್ಟಸ್ವಾಮಿ, ರಾಘು, ಅನುಷ, ಅಬ್ದುಲ್‌ಭಾಷಾ, ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಸೆಪ್ಟೆಂಬರ್ ಮತ್ತು ಅಕ್ಟೋಬರ್ 2023 ರಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ಆಂತಿಮ ವರ್ಷದ ಬಿಬಿಎ ವಿಭಾಗದಲ್ಲಿ ಶೇಕಡ 93.71 ಆಂಕ ಗಳಿಸಿ ನಾಲ್ಕನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಕು. ಸಿಂಧು ಕೆ. ಸೇರಿದಂತೆ ಇತರೆ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಗೌರವಿಸಿ, ಸನ್ಮಾನಿಸಿದರು.
ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಕೆ.ಸಿ.ಚಂದ್ರಪ್ಪ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಟಿ.ಚಂದ್ರಶೇಖರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇದನ್ನೂ ಓದಿ: Costliest Handbags: ಪ್ರತಿಷ್ಠಿತ ಬ್ರಾಂಡ್‌ಗಳ ಹ್ಯಾಂಡ್ ಬ್ಯಾಗ್ ಬೆಲೆ ಕೇಳಿದರೆ ಹೌಹಾರುವುದು ಗ್ಯಾರಂಟಿ!
ಉಪನ್ಯಾಸಕ ನರೇಂದ್ರ ಕುಳಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿಕ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಡಾ. ರತ್ನಾಕರ ಸ್ವಾಗತಿಸಿದರು.