ಸೊರಬ: ತಾಲೂಕಿನ ಲಕ್ಕವಳ್ಳಿಯ ಶ್ರೀ ಕ್ಷೇತ್ರ ಮೋಕ್ಷ ಮಂದಿರ ಜೈನ ಮಠದಲ್ಲಿ (Jain Mutt) ಶ್ರೀ ಭೈರವಿ ಯಕ್ಷಿ, ಶ್ರೀ ಮಹಿಷಾಳ ಕ್ಷೇತ್ರಪಾಲ ಪ್ರತಿಷ್ಠಾಪನಾ ಕಾರ್ಯಕ್ರಮ ಜೈನ (Jain) ಸಂಪ್ರದಾಯದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಶ್ರೀ ದೇವರ ಪ್ರತಿಷ್ಠಾಪನಾ ಅಂಗವಾಗಿ ಕಂಕಣಧಾರಣೆ, ಧ್ವಜಾರೋಹಣ, ಪಂಚಾಮೃತ ಅಭಿಷೇಕ, ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಶ್ರೀ ಕ್ಷೇತ್ರದ ಶ್ರೀ ವೃಷಭಸೇನಾ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಇದನ್ನೂ ಓದಿ: Aditya L1 Mission: ಸೂರ್ಯಯಾನಕ್ಕೆ ಆದಿತ್ಯ ಎಲ್ 1 ಮಿಷನ್ ರೆಡಿ; ತಾಲೀಮು ಅಂತ್ಯ, ಉಡಾವಣೆಯೊಂದೇ ಬಾಕಿ
ಸವದಿಯ ಶ್ರೀ ಆನಂದ ಗುಣಧರ ಉಪಾಧ್ಯ ಅವರು ಪೂಜಾ ಕಾರ್ಯಗಳ ನೇತೃತ್ವ ವಹಿಸಿದ್ದರು. ಯಜಮಾನ-ಯಜಮಾನಿಯಾಗಿ ಬಾಗಲಕೋಟೆ ಜಿಲ್ಲೆಯ ಹಳಿಂಗಳಿಯ ಅಭಯಕುಮಾರ ಅಣ್ಣಾ ಸಾಹೇಬ ದೇಸಾಯಿ ಹಾಗೂ ಅರ್ಚನ ಅಭಯ ಕುಮಾರ ದೇಸಾಯಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Karnataka CET, NEET UG Counselling 2023: ಎರಡನೇ ಸುತ್ತಿನ ಆಪ್ಷನ್ ಎಂಟ್ರಿ ಆರಂಭ, ಈ ಸ್ಟೆಪ್ಸ್ ಫಾಲೋ ಮಾಡಿ…
ಈ ಸಂದರ್ಭದಲ್ಲಿ ಮಲ್ಲಿನಾಥ ಶಿರಗಟ್ಟಿ, ಮಹಾಬಲ ಪಾಟೀಲ್, ಮಹಾವೀ ಶಿರಾಡಾನಿ, ಚಂದ್ರಕಾಂತ್ ಮಲಗೊಡನವರ್, ವೀರಣ್ಣ ಚವಜ್, ಧನವಂತ ಪಾಟೀಲ್, ಶ್ರೀ ಮೋಕ್ಷ ಮಂದಿರ ಜೈನ ಮಠದ ಪದಾಧಿಕಾರಿಗಳು, ಲಕ್ಕವಳ್ಳಿ ಗ್ರಾಮ ಸಮಿತಿಯವರು, ಗ್ರಾಮಸ್ಥರು ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.