Site icon Vistara News

Siganduru Temple: ಸಿಗಂದೂರಿಗೆ ತೆರಳಲು ಪ್ಲ್ಯಾನ್‌ ಮಾಡಿದ್ದರೆ ಗಮನಿಸಿ: ಈ ದಿನ ನಿಮಗಿರಲ್ಲ ದೇವಿ ದರ್ಶನ

sigandur chowdeshwari temple

ಸಾಗರ: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪುಣ್ಯ ಸ್ಥಳ ಸಾಗರದ ಸಿಗಂದೂರು (Siganduru Temple). ಬೇಸಿಗೆ ರಜೆ ಎಂದು ನೀವೇನಾದರೂ ಅಲ್ಲಿಗೆ ತೆರಳುವುದಕ್ಕೆ ಯೋಜನೆ ಹಾಕಿಕೊಂಡಿದ್ದರೆ ಈ ಸುದ್ದಿಯನ್ನು ಓದಲೇಬೇಕು. ಆ ಒಂದು ದಿನದಂದು ದೇಗುಲದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

ಹೌದು. ಇದೇ ತಿಂಗಳ 10ನೇ ತಾರೀಖಿನಂದು ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತದಾನ ಮಾಡಬೇಕಾಗಿರುವುದು ನಮ್ಮೆಲ್ಲರ ಹಕ್ಕು. ಹಾಗಾಗಿ ಆ ದಿನದಂದು ಭಕ್ತರಿಗೆ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಿಗಂದೂರಿನ ಧರ್ಮದರ್ಶಿಗಳಾದ ಡಾ.ಎಸ್‌.ರಾಮಪ್ಪ ಅವರು ತಿಳಿಸಿದ್ದಾರೆ. ಜನರು ಚುನಾವಣೆಯ ರಜೆಯನ್ನು ಪ್ರವಾಸಕ್ಕೆಂದು ಹಾಳು ಮಾಡದೆಯೇ ತಪ್ಪದೇ ಮತದಾನವನ್ನು ಮಾಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: Karnataka Election 2023: ಬಿಜೆಪಿ ಕದ್ದಿರುವ ಹಣ ಮತ್ತೆ ಜನರಿಗೇ ವಾಪಸ್ ಕೊಡುತ್ತೇವೆ : ರಾಹುಲ್ ಗಾಂಧಿ ಭರವಸೆ

ಸರ್ವರೂ ಮತದಾನದಲ್ಲಿ ಭಾಗಿಯಾಗಿ

“ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಲು ಪ್ರತಿ ಮತದಾರನಿಗೂ ಹಕ್ಕಿದೆ. ಚುನಾವಣೆ ಎಂಬುದು ಗಣತಂತ್ರದ ಹಬ್ಬವಿದ್ದಂತೆ. ಈ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದಂತೆ ಸರ್ವರೂ ಮತದಾನ ಮಾಡಬೇಕು. ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಂದಿನ ಪ್ರವಾಸವನ್ನು ರದ್ದು ಮಾಡಿ ಸರ್ವರೂ ಮತದಾನದಲ್ಲಿ ಭಾಗಿಯಾಗಿ ಸಂವಿಧಾನವನ್ನು ಬಲಗೊಳಿಸಬೇಕು” ಎಂದ ಅವರು ತಿಳಿಸಿದ್ದಾರೆ.

Exit mobile version